Songtexte Gudiyanodiranna - C.Aswath
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಗುಡಿಯ ನೋಡಿರಿದು ಪೊಡವಿಗೆ ಒಡೆಯನು
ಗುಡಿಯ ನೋಡಿರಿದು ಪೊಡವಿಗೆ ಒಡೆಯನು
ಅಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಮೂರು ಮೂಲೆಯ ಕಲ್ಲು, ಅದರೊಳು ಜಾರುತಿರುವ ಕಲ್ಲು
ಮೂರು ಮೂಲೆಯ ಕಲ್ಲು, ಅದರೊಳು ಜಾರುತಿರುವ ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಆರು ಮೂರು ಕಟ್ಟಿ ಮೇಲಕೆ ಏರಿದವನು ಘಟ್ಟಿ
ಆರು ಮೂರು ಕಟ್ಟಿ ಮೇಲಕೆ ಏರಿದವನು ಘಟ್ಟಿ
ಭೇರಿ ಕಾಳಿ ಶಂಖ ಭಾರಿಸು ನಾದದಿ
ಭೇರಿ ಕಾಳಿ ಶಂಖ ಭಾರಿಸು ನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಸಾಗುತಿಹವು ದಿವಸ ಬಹುದಿನ ಹೋಗಿ ಮಾಡಿ ಪಾಯ್ಸ
ಸಾಗುತಿಹವು ದಿವಸ ಬಹುದಿನ ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ
ಯೋಗಿ ರಾಜ ಶಿಶುನಾಳಧೀಶ
ತಾನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ
ಗುಡಿಯ ನೋಡಿರಣ್ಣಾ
ದೇಹದ ಗುಡಿಯ ನೋಡಿರಣ್ಣಾ

Attention! Feel free to leave feedback.