Raghu Dixit - Preetiya Hesare Neenu (From "Happy New Year") Lyrics

Lyrics Preetiya Hesare Neenu (From "Happy New Year") - Raghu Dixit



ಏನೋ ಇದು ಹಾಯಾಗಿದೆ
ನೂರು ಕನಸಿಗೆ ರಂಗೇರಿದೆ
ಸಣ್ಣ ಸಣ್ಣ ಆಸೆಗೆ
ಜೀವ ಬಂದಂತಿದೆ
ಇದ್ದಕಿದ್ದ ಹಾಗೆಯೇ
ಖುಷಿ ಕಣ್ತುಂಬಿದೆ
ತೇಲಾಡುತಾ I've fallen in love
ರೋಮಾಂಚನ I've fallen in love
ಸಂತೋಷದ ಉಲ್ಲಾಸದ ಗೂಡಾದೆ ನಾ
ಪ್ರೀತಿಯ ಹೆಸರೇ ನೀನು
ಪ್ರತೀ ಕ್ಷಣ ಕಂಡಾಗ ನಿನ್ನನು
ಅದೇನೋ ಏನೋ ಏನೋ ಆಗಿದೆ
ಪದೇ ಪದೇ ನನ್ನ ಹೆಜ್ಜೆ ದಾರಿ ತಪ್ಪಿ ನಿನ್ನನೇ ಬಂದು ಸೇರಿದೆ
ಕಣ್ಣ ಕಣ್ಣ ಮಾತಿಗೆ ಭಾಷೆಯೊಂದು ಏತಕೆ
ಇದ್ದಕ್ಕಿದ್ದ ಹಾಗೆಯೇ ಖುಷಿ ಕಣ್ತುಂಬಿದೆ
ತೇಲಾಡುತಾ I've fallen in love
ರೋಮಾಂಚನ I've fallen in love
ಸಂತೋಷದ ಉಲ್ಲಾಸದ ಗೂಡಾದೆ ನಾ
ಪ್ರೀತಿಯ ಹೆಸರೇ ನೀನು
ದಿನಾ ದಿನ ಬೇರೆಲ್ಲವನ್ನು ನೆನೆವೆ ನಾನು ನಿನ್ನನು ನೆನೆದ ನಂತರ
ಸತಾಯಿಸೋ ಒಂದೊಂದು ಚಿಂತೆಗೀಗ ನಿನ್ನಲೇ ಇದೆ ಎಲ್ಲ ಉತ್ತರ
ದೂರ ದೂರವಾಗಲಿ, ಬೇರೆ ಎಲ್ಲ ಕಾಳಜಿ
ಪೂರ ಪೂರ ವಾಲಲಿ ನಿನ್ನ ಕಡೆಗೆ ಮನ
ತೇಲಾಡುತಾ I've fallen in love
ರೋಮಾಂಚನ I've fallen in love
ಸಂತೋಷದ ಉಲ್ಲಾಸದ ಗೂಡಾದೆ ನಾ
ಪ್ರೀತಿಯ ಹೆಸರೇ ನೀನು
ಪ್ರೀತಿಯ ಹೆಸರೇ ನೀನು



Writer(s): Raghavendra Kamath, Vasuki Vaibhav


Raghu Dixit - RDX Hits
Album RDX Hits
date of release
06-11-2020



Attention! Feel free to leave feedback.