Rajesh Krishnan feat. K. S. Chithra - Srigandada Gombe - From "Yejamana" Lyrics

Lyrics Srigandada Gombe - From "Yejamana" - K. S. Chithra , Rajesh Krishnan



ಶ್ರೀ ಗಂಧದ ಗೊಂಬೆ
ಮೆಲ್ಲ ಮೆಲ್ಲನೆ ಬರುತಾಳಮ್ಮ,
ಪ್ರೀತಿ ಅರಮನೆಗೆ
ಬೆಳ್ಳಿ ಬೆಳಕು ತರುತಾಳಮ್ಮ
ಮನೆ ತನಕ ಬಂದ ಹೆಣ್ಣು
ಮನೆತನ ಬೆಳಗಲಿ
ನಮ್ಮ ಹರಕೆಯು ಫಲಿಸಲಿ
ಶ್ರೀ ಗಂಧದ ಗೊಂಬೆ
ಮೆಲ್ಲ ಮೆಲ್ಲನೆ ಬರುತಾಳಮ್ಮ
ಸರಿಗಮಗಳ ಸಾಗರದಲ್ಲಿ
ಅಲೆಗಳ ಹಾಗೆ ಇವಳ ಕಾಲ್ಗೆಜ್ಜೆ
ಘಮ ಘಮಗಳ ಗೋಪುರದಲ್ಲಿ
ನಿತ್ಯ ವಸಂತ ಇವಳ ಲಜ್ಜೆ
ಮೆಲ್ಲುಸಿರು ಏದುಸಿರು ಏನಿರಲಿ
ತನ್ನ ಕನಸಿನ ಬಾಗಿನ ನಗುತಿರಲಿ
ಶ್ರೀ ಗಂಧದ ಗೊಂಬೆ
ಮೆಲ್ಲ ಮೆಲ್ಲನೆ ಬರುತಾಳಮ್ಮ,
ನಂದಾದೀಪ ಹುಟ್ಟಿದ ಮನೆಗೆ
ಆರದ ದೀಪ ನೀ ಮೆಟ್ಟಿದ ಮನೆಗೆ
ಬಯಸಿ ತಂದ ಅನುಬಂಧ
ಸಾವಿರ ಸಾವಿರ ಜನ್ಮ ಇರೋವರೆಗೆ
ಊರೆಲ್ಲ ಹರಸಿದರೆ ಪುಷ್ಪಾoಜಲಿ
ಅಣ್ಣನ ಹರಕೆ ಆನಂದ ಭಾಷ್ಪoಜಲಿ
ಶ್ರೀ ಗಂಧದ ಗೊಂಬೆ
ಮೆಲ್ಲ ಮೆಲ್ಲನೆ ಬರುತಾಳಮ್ಮ
ಪ್ರೀತಿ ಅರಮನೆಗೆ
ಬೆಳ್ಳಿ ಬೆಳಕು ತರುತಾಳಮ್ಮ
ಮನೆ ತನಕ ಬಂದ ಹೆಣ್ಣು
ಮನೆತನ ಬೆಳಗಲಿ
ನಮ್ಮ ಹರಕೆಯು ಫಲಿಸಲಿ
ಮನೆತನ ಬೆಳಗಲಿ
ನಮ್ಮ ಹರಕೆಯು ಫಲಿಸಲಿ




Rajesh Krishnan feat. K. S. Chithra - Duets of K.S. Chitra - Kannada Hits 2016
Album Duets of K.S. Chitra - Kannada Hits 2016
date of release
13-07-2016



Attention! Feel free to leave feedback.