S. P. Balasubrahmanyam feat. Chitra - Hoovige Thangali (From "Chandrodaya") Lyrics

Lyrics Hoovige Thangali (From "Chandrodaya") - S. P. Balasubrahmanyam , K. S. Chithra



ಹೂವಿಗೆ ತಂಗಾಳಿ ಬೇಡವೇ.
ತಂಗಾಳಿ ಬೇಡವೇ...
ಹೂವಿಗೆ ತಂಗಾಳಿ ಬೇಡವೇ.
ತಂಗಾಳಿ ಬೇಡವೇ...
ಹೂವಿಗೆ ತಂಗಾಳಿ ಬೇಡವೇ.
ತಂಗಾಳಿ ಬೇಡವೇ...
ಗಾಳಿ ಮೇಲೆ ಮಲ್ಲೆ ಮೊಗ್ಗು ಮುನಿಸಿಕೊಂಡರೆ...
ಮುನಿಸಿಕೊಂಡರೇ... ಸುಗಂಧವೆಲ್ಲಿದೆ...
ಸಾಗರ ನದಿಗೆ ಬೇಡವೇ... ನದಿಗೆ ಬೇಡವೇ...
ಕಡಲ ಮೇಲೆ ನದಿಯು ತಾನು ಮುನಿಸಿಕೊಂಡರೆ...
ಮರಳಿ ಹೋಗಲು ದಾರಿಯಲ್ಲಿದೇ... ಏ...
ಹೂವಿಗೆ ತಂಗಾಳಿ ಬೇಡವೇ.
ತಂಗಾಳಿ ಬೇಡವೇ...
ಆಆಆಆಆಆ. ಆಆಆಆಆಆ...
ವಸಂತ ಕಾಲಕೇ. ಸಂಗೀತ ಕೋಗಿಲೆ.
ತನ್ನಿಂಚರ ತರದಿದ್ದರೆ. ಏನೆನ್ನಲೀ...
ತನ್ನಿಂಚರ ತರದಿದ್ದರೆ. ಏನೆನ್ನಲೀ...
ವಿವಾಹ ಬಂಧನ. ಸಮ್ಮಿಲನ ಗಾಯನ...
ನಿನೊಬ್ಬನೇ ಹಾಡೇಂದರೆ. ಏನೆನ್ನಲೀ...
ನಿನೊಬ್ಬನೇ ಹಾಡೇಂದರೆ. ಏನೆನ್ನಲೀ...
ವೇದದ ನಡುವೆ. ಬೊಂಬೆಯ ಮದುವೆ.
ಅದೇಕೆ ಬೇಕೋ... ಕಾಣೇ...
ಭೂಮಿಗೆ ಚಂದ್ರಮನು ಬೇಡವೇ...
ಚಂದ್ರಮನು ಬೇಡವೇ...
ಚಂದ್ರನೊಡನೆ ಭೂಮಿ ತಾನು ಮಾತು ಬಿಟ್ಟರೆ.
ಪ್ರೀತಿ ಪ್ರೇಮಕೆ... ಸ್ಪೂರ್ತಿ ಎಲ್ಲಿದೇ...
ಹೂವಿಗೆ ತಂಗಾಳಿ ಬೇಡವೇ.
ತಂಗಾಳಿ ಬೇಡವೇ...
ಆಆಆಆಆಆ ಆಆಆಆಆಆ...
ನಿಸರ್ಗ ನಿಯಮವಾ. ಮೀರೋದು ಸಾಧ್ಯವಾ.
ನಡು ರಾತ್ರಿಲಿ. ಬಯಸದಿರೊ. ಸೂರ್ಯೋದಯ...
ಇನ್ನೆಂದಿಗೂ. ನಿ ಕಾಣೆಯಾ ಸೂರ್ಯೋದಯ...
ಮನಸ್ಸನ್ನು ಬದಲಿಸು. ಬಾಳನ್ನು ಪ್ರೀತಿಸು.
ಭಾವಗಳ ಬಾನಲ್ಲಿ ತಾ. ಪ್ರೇಮೋದಯ...
ನಿನಗಾಗಿಯೆ ಕಾದಿರುವುದೀ. ಚಂದ್ರೋದಯ...
ಬಿರಿಯೋ ಮೊದಲು ಹೃದಯದ ಅಳಲು
ನಿನೊಮ್ಮೆ ಕೇಳೇ ಜಾಣೆ...
ಹೂವಿಗೆ ತಂಗಾಳಿ ಬೇಡವೇ.
ತಂಗಾಳಿ ಬೇಡವೇ...
ಗಾಳಿ ಮೇಲೆ ಮಲ್ಲೆ ಮೊಗ್ಗು ಮುನಿಸಿಕೊಂಡರೆ...
ಮುನಿಸಿಕೊಂಡರೇ... ಸುಗಂಧವೆಲ್ಲಿದೆ...
ಹೂವಿಗೆ ತಂಗಾಳಿ ಬೇಡವೇ.
ತಂಗಾಳಿ ಬೇಡವೇ...



Writer(s): hamsalekha


S. P. Balasubrahmanyam feat. Chitra - Snehake Sneha - S P Balasubramanyam Sings for Stars




Attention! Feel free to leave feedback.