Vasuki Vaibhav - Arere Avala Naguva Lyrics

Lyrics Arere Avala Naguva - Vasuki Vaibhav



ಅರೆರೆ ಅವಳ ನಗುವ
ನೋಡಿ ಮರತೆ ಜಗವ
ಹಗಲುಗನಸು ಮುಗಿಸಿ
ಸಂಜೆ ಮೇಲೆ ಸಿಗುವ
ಮುಸ್ಸಂಜೆಗೆ ಹಾಡಾಗಲು ತಂಗಾಳಿಯ ತಯಾರಿ
ಸದ್ದಿಲ್ಲದೇ ಸೂರ್ಯನು ಬಾನಾಚೆಗೆ ಪರಾರಿ
ಅವೆಳೆದುರು ಬಂದಾಗ ಎದೆ ಬಡಿತ ಜೋರಾಗಿ
ಕೂಗೋ ಕೋಗಿಲೆ ಮನದ ಮಾಮರಕೆ ಮರಳಿದೆ
Mike-u ತರುವುದನೆ ಮರೆತಿದೆ
ಹಾಡು ಹಗಲೇನೆ ಬಾನಲಿ ನೂರುದಾರಿಯ ತಪ್ಪಿದೆ
ಹರೆಯವು ಬಳಿ ಬಂದರೆ Borewellಇಗು ಬಾಯಾರಿಕೆ
ವಯಸಿಗು ಕನಸೆಲ್ಲವ ನನಸಾಗಿಸೋ ಕೈಗಾರಿಕೆ
ಗಿಡ ಮರವಾಗೋ ವರಾ ದೊರೆತಾಗ
ಬೆಟ್ಟ ಬಳಿ ಕರೆದು ಗುಟ್ಟು ಹೇಳಿದೆ
ಹೊಟ್ಟೆಯೊಳಗಿಂದ ಚಿಟ್ಟೆ ಹಾರಿದೆ
ಬಿಸಿಲೇರೋ Timeಅಲ್ಲಿ
ಬೀಸಿರಲು ತಂಗಾಳಿ
ಸೇರೋ ಮೋಡವು Mood-u ಬಂದ ಕಡೆ ಓಡಿದೆ
ಗಾಳಿ ಮಾತನ್ನೇ ಕೇಳದೆ
ಓಡೋ ಕಾಲದ ಕಾಲಿಗೆ ಕಾಲು ಗೆಜ್ಜೆ ಕಟ್ಟಿದೆ
ದಿನ ಶಾಲೆಗೆ Late ಆದರೂ
ತುಸು ನಾಚುತ ತಲೆ ಬಾಚಿದೆ
ಕೊಳ ಪೆಟ್ಟಿಗೆ ಏಟಾದರೂ ನಸು ನಾಚುತ ಕೈ ಚಾಚಿದೆ
ಎಳೆ ಹೃದಯಕ್ಕೆ ಮಳೆ ಸುರಿದಾಗ
ಮೀಸೆ ಅಂಚಲ್ಲಿ ಆಸೆ ಚಿಗುರಿದೆ
Bunch-u Bunch ಆಗಿ ಕನಸು ಬಂದಿದೆ
ಕಿರು ನಗೆಯ ತೇರನ್ನು ಕಣ್ಣಲ್ಲೇ ಎಳೆವಾಗ
ರಾಶಿ ಕಾಮನೆ ಎದೆಯ ಬಾಗಿಲಿಗೆ ಬಂದಿದೆ
ಏನೂ ಸುಳಿವನ್ನೇ ನೀಡದೆ



Writer(s): Vaibhav Vasuki, Trilok Trivikrama


Vasuki Vaibhav - Sarkari Hi. Pra. Shaale, Kasaragodu
Album Sarkari Hi. Pra. Shaale, Kasaragodu
date of release
28-07-2018




Attention! Feel free to leave feedback.