Songtexte




ಕನ್ನಡ ನಾಡಿನ ನೆಲ
ಈಶನ ಪೂಜೆಯ ಪ್ರತಿಫಲ
ಕನ್ನಡ ನಾಡಿನ ನೆಲ
ಈಶನ ಪೂಜೆಯ ಪ್ರತಿಫಲ
ನೇತ್ರವತಿಯ ಪುಣ್ಯ ಜಲ
ನೀಡುವ ಕ್ಷೇತ್ರ ಧರ್ಮಸ್ಥಳ
ಕನ್ನಡ ನಾಡಿನ ನೆಲ
ಈಶನ ಪೂಜೆಯ ಪ್ರತಿಫಲ
ಮಂಜುನಾಥನು ಮನೆ ಮಾಡಿರುವ
ಕ್ಷೆತ್ರರಾಜನ ದರ್ಶನ
ಮಂಜುನಾಥನು ಮನೆ ಮಾಡಿರುವ
ಕ್ಷೆತ್ರರಾಜನ ದರ್ಶನ
ಹೊಂದಿದ ಕೂಡಲೆ ಜನ್ಮ ಕೋಟಿಯ
ಹೊಂದಿದ ಕೂಡಲೆ ಜನ್ಮ ಕೋಟಿಯ
ಪಾಪ ರಾಶಿಯು ನಾಶನ
ಕನ್ನಡ ನಾಡಿನ ನೆಲ
ಈಶನ ಪೂಜೆಯ ಪ್ರತಿಫಲ
ನೇತ್ರಾವತಿಯಲಿ ಶಿವ ನಾಮವನು
ನೆನೆಯುತ ಮಾಡಿದ ಸ್ನಾನ
ನೇತ್ರಾವತಿಯಲಿ ಶಿವ ನಾಮವನು
ನೆನೆಯುತ ಮಾಡಿದ ಸ್ನಾನ
ದೇವ ಗಂಗೆಯಲಿ ಮೀಯಲು ಪಡೆಯುವ
ದೇವ ಗಂಗೆಯಲಿ ಮೀಯಲು ಪಡೆಯುವ
ಪುಣ್ಯಕೋಟಿ ಸಮಾನ
ಪುಣ್ಯಕೋಟಿ ಸಮಾನ
ಕನ್ನಡ ನಾಡಿನ ನೆಲ
ಈಶನ ಪೂಜೆಯ ಪ್ರತಿಫಲ
ಧರ್ಮ ನೆಲೆಸಿಹ ಕರ್ಮ ಕಳೆಯುವ
ಧರ್ಮಸ್ಥಳವಿದೇ ಪಾವನ
ಧರ್ಮ ನೆಲೆಸಿಹ ಕರ್ಮ ಕಳೆಯುವ
ಧರ್ಮಸ್ಥಳವಿದೇ ಪಾವನ
ಮರ್ಮವರಿತವನು ಸರ್ವಧರ್ಮಗಳ
ಮರ್ಮವರಿತವನು ಸರ್ವಧರ್ಮಗಳ
ಸಾರ ಕಾಣುವ ತಾಣ
ಕನ್ನಡ ನಾಡಿನ ನೆಲ
ಈಶನ ಪೂಜೆಯ ಪ್ರತಿಫಲ
ನೇತ್ರವತಿಯ ಪುಣ್ಯ ಜಲ
ನೀಡುವ ಕ್ಷೇತ್ರ ಧರ್ಮಸ್ಥಳ
ಕನ್ನಡ ನಾಡಿನ ನೆಲ
ಈಶನ ಪೂಜೆಯ ಪ್ರತಿಫಲ




Attention! Feel free to leave feedback.
Wird geladen
Wird geladen