Hariharan - Nannane Kele Nanna Pranave (From "Ekangi") Songtexte

Songtexte Nannane Kele Nanna Pranave (From "Ekangi") - Hariharan




ನನ್ನಾಣೆ ಕೇಳೆ ನನ್ನ ಪ್ರಾಣವೇ.
ನಂಗೆ ಬೇರೆ ಯಾರ್ ಇಲ್ಲವೇ.
ನಿನ್ನಾಣೆ ಕೇಳೆ ನನ್ನ ಪ್ರಾಣವೇ.
ಬೇರೆ ಯಾರು ಬೇಕಿಲ್ಲವೇ.
ಪ್ರೀತಿ ಕಣ್ಣು ತೆರೆದಾಗ ಮರೆತೋಯ್ತು ಲೋಕ.
ಕನಸು ಕಣ್ಣು ಬಿಟ್ಟಾಗ ಶುರು ಪ್ರೇಮಲೋಕ...
ಇಲ್ಲಿ ನೀನು ನಾನು, ನಾನು ನೀನು ಇಬ್ಬರೇ...
ಬೇರೆ ಯಾರು ಇಲ್ಲ ಕೇಳೆಲೇ...
ನನ್ನಾಣೆ ಕೇಳೆ ನನ್ನ ಪ್ರಾಣವೇ.
ನಂಗೆ ಬೇರೆ ಯಾರ್ ಇಲ್ಲವೇ.
ನಿನ್ನಾಣೆ ಕೇಳೆ ನನ್ನ ಪ್ರಾಣವೇ.
ಬೇರೆ ಯಾರು ಬೇಕಿಲ್ಲವೇ.
ಹೂವು ಅರಳದ ಲೋಕ ಇದು.
ಹೃದಯ ಆರಳೋ ಲೋಕ ಇದು.
ಹಕ್ಕಿ ಹಾರದ ಲೋಕ ಇದು.
ಪ್ರೇಮಿಗಳು ಹಾರೋ ಲೋಕ ಇದು.
ಹಸಿರು ಇಲ್ಲ ಇಲ್ಲಿ ಉಸಿರೇ ಎಲ್ಲಾ ಇಲ್ಲಿ.
ಅಲೆಗಳು ಇಲ್ಲ ಇಲ್ಲಿ ಆಸೆಗಳೆ ಎಲ್ಲಾ ಇಲ್ಲಿ.
ನಾಳೆ ಅನ್ನೋ ಮಾತೆ ಇಲ್ಲ ಲೋಕದಲ್ಲಿ ಕೇಳೆಲೇ...
ನನ್ನಾಣೆ ಕೇಳೆ ನನ್ನ ಪ್ರಾಣವೇ.
ನಂಗೆ ಬೇರೆ ಯಾರ್ ಇಲ್ಲವೇ.
ನಿನ್ನಾಣೆ ಕೇಳೆ ನನ್ನ ಪ್ರಾಣವೇ.
ಬೇರೆ ಯಾರು ಬೇಕಿಲ್ಲವೇ.
ಸೂರ್ಯನಿಲ್ಲದ ಲೋಕ ಇದು.
ಚಂದ್ರನಿಲ್ಲದ ಲೋಕ ಇದು.
ಸಮಯ ತಿರುಗದ ಲೋಕ ಇದು.
ವೇಳೆ ಕಳೆಯದ ಲೋಕ ಇದು.
ಒಂದೇ ಒಂದು ಕಥೆ ಇಲ್ಲಿ.
ನನ್ನ ನಿನ್ನ ಕಥೆ ಇಲ್ಲಿ.
ಒಂದೇ ಒಂದು ಸಾಲು ಇಲ್ಲಿ.
ಪ್ರೇಮಕ್ಕೆ ಸಾವು ಎಲ್ಲಿ.
ಏಳು ಜನ್ಮ ಒಂದೇ ದಿನ ಲೋಕದಲ್ಲಿ ಕೇಳೆಲೇ...
ನನ್ನಾಣೆ ಕೇಳೆ ನನ್ನ ಪ್ರಾಣವೇ.
ನಂಗೆ ಬೇರೆ ಯಾರ್ ಇಲ್ಲವೇ.
ನಿನ್ನಾಣೆ ಕೇಳೆ ನನ್ನ ಪ್ರಾಣವೇ.
ಬೇರೆ ಯಾರು ಬೇಕಿಲ್ಲವೇ.
ಪ್ರೀತಿ ಕಣ್ಣು ತೆರೆದಾಗ ಮರೆತೋಯ್ತು ಲೋಕ.
ಕನಸು ಕಣ್ಣು ಬಿಟ್ಟಾಗ ಶುರು ಪ್ರೇಮಲೋಕ...
ಇಲ್ಲಿ ನೀನು ನಾನು, ನಾನು ನೀನು ಇಬ್ಬರೇ...
ಬೇರೆ ಯಾರು ಇಲ್ಲ ಕೇಳೆಲೇ...
ನನ್ನಾಣೆ ಕೇಳೆ ನನ್ನ ಪ್ರಾಣವೇ.
ನಂಗೆ ಬೇರೆ ಯಾರ್ ಇಲ್ಲವೇ.
ನಿನ್ನಾಣೆ ಕೇಳೆ ನನ್ನ ಪ್ರಾಣವೇ.
ಬೇರೆ ಯಾರು ಬೇಕಿಲ್ಲವೇ.



Autor(en): v. ravichandran


Attention! Feel free to leave feedback.