Kunal Ganjawala - Nannavalave (From "Meravanige") Songtexte

Songtexte Nannavalave (From "Meravanige") - Kunal Ganjawala




ನನ್ನೊಲವೆ ನನ್ನೊಲವೆ
ಹೀಗೊಂದು ಹೃದಯ
ನನ್ನಲ್ಲೂ ಇದೆಯಾ
ಎನ್ನುವ ಶಂಕೆಯು ಮೂಡುತಿದೆ
ಅಂದದ ಅಂಜಿಕೆ ಕಾಡುತಿದೆ
ನನ್ನೊಲವೆ ನನ್ನೊಲವೆ
ಹೀಗೊಂದು ಹೃದಯ
ನನ್ನಲ್ಲೂ ಇದೆಯಾ
ಎನ್ನುವ ಶಂಕೆಯು ಮೂಡುತಿದೆ
ಅಂದದ ಅಂಜಿಕೆ ಕಾಡುತಿದೆ
ಕನ್ನಡಿ ಒಳಗೆ
ನಿನ್ನದೆ ಬಿಂಬ
ಚಂದದಿ ನಗುತಲಿದೆ
ಮುಟ್ಟಲು ಹೋದರೆ
ನಾಚಿಕೆಯಲ್ಲೀ
ಅಲೆಯಲಿ ಸರಿಯುತ್ತಿದೆ
ಮೆಲ್ಲಗೆ ಈಗ
ಬೆಲ್ಲದ ಹಾಗೆ
ಕಲ್ಲೆದೆ ಕರಗುತಿದೆ
ಮುಳ್ಳಿನ ಮನದಾ
ಮಂಟಪದಲ್ಲೂ
ಮಲ್ಲಿಗೆ ಅರಳುತಿದೆ
ನನ್ನೊಲವೆ ನನ್ನೊಲವೆ
ಹೀಗೊಂದು ಹೃದಯ
ನನ್ನಲ್ಲೂ ಇದೆಯಾ
ಎನ್ನುವ ಶಂಕೆಯು ಮೂಡುತಿದೆ
ಅಂದದ ಅಂಜಿಕೆ ಕಾಡುತಿದೆ
ಸುಂದರವಾದ ಸುಂಟರಗಾಳಿ
ಮನದಿ ಬೀಸುತಿದೆ
ನಿನ್ನದೆ ರೂಪ
ನಿನ್ನದೆ ಧ್ಯಾನ
ನೆನಪಿನ ನಾಡೊಳಗೆ
ಪದಗಳೆ ಇರದಾ ಕಾಗದವನ್ನು
ಮನದಲ್ಲೆ ಬರೆಯುವೆನು
ಕದಗಳೇ ಇರದ
ಕನಸಿನ ಊರಿಗೆ
ನಿನ್ನನು ಕರೆಯುವೆನು
ನನ್ನೊಲವೆ ನನ್ನೊಲವೆ
ಹೀಗೊಂದು ಹೃದಯ
ನನ್ನಲ್ಲೂ ಇದೆಯಾ
ಎನ್ನುವ ಶಂಕೆಯು ಮೂಡುತಿದೆ
ಅಂದದ ಅಂಜಿಕೆ ಕಾಡುತಿದೆ



Autor(en): V.NAGENDRA PRASAD, V NAGENDRA PRASAD



Attention! Feel free to leave feedback.