L. R. Eswari - Dooradinda Bandantha (From "Samshaya Phala") Songtexte

Songtexte Dooradinda Bandantha (From "Samshaya Phala") - L. R. Eswari




ದೂರದಿಂದ ಬಂದಂಥ ಸುಂದರಾಂಗ ಜಾಣ
ನೋಟದಲ್ಲೆ ಸೂರೆಗೊಂಡ ಅಂತರಂಗ ಪ್ರಾಣ
ದೂರದಿಂದ ಬಂದಂಥ ಸುಂದರಾಂಗ ಜಾಣ
ನೋಟದಲ್ಲೆ ಸೂರೆಗೊಂಡ ಅಂತರಂಗ ಪ್ರಾಣ
ಈತನಂತರಾಳ ಹೇಗೊ ರೀತಿ ನೀತಿ ಹೇಗೊ
ನಾ ಕಾಣೆ ನಾ ಕಾಣೆ ನನ್ನ ದೇವರಾಣೆ
ಭಲಾರೆ!
ಇವ ಭಾರಿ ಮೋಜುಗಾರ
ಭಲಾರೆ!
ಇವ ತೀರ ಮೋಸಗಾರ
ಭಲಾರೆ!
ಇವ ಭಾರಿ ಮೋಜುಗಾರ
ಭಲಾರೆ!
ಇವ ತೀರ ಮೋಸಗಾರ
ಆಹ ಆಹ ಆಹ ಆಹ ಆಹ
ದೂರದಿಂದ ಬಂದಂಥ ಸುಂದರಾಂಗ ಜಾಣ
ಕಾಲ ಕೂಡಿ ಬಂದಾಗ ಕಾರ್ಯ ಸಾಗಲಿ
ಏನೆ ಆಗಲಿ ಏನೆ ಹೋಗಲಿ
ಕಾಲ ಕೂಡಿ ಬಂದಾಗ ಕಾರ್ಯ ಸಾಗಲಿ
ಏನೆ ಆಗಲಿ ಏನೆ ಹೋಗಲಿ
ಬೀಸು ಗಾಳಿ ಬಂದಾಗ ರಾಚಿ ತೂರಿಕೊ
ಬಾಚಿ ಹೇರಿಕೊ ದೋಚಿ ಜಾರಿಕೊ
ಅಂದ ಚಂದ ಕಂಡಾಗ ನಾಚಿಕೊಳ್ಳಬೇಡ
ಹಿಂದೆ ನಿಂತು ಕೈ ಕೈ ಹಿಂಡಿಕೊಳ್ಳಬೇಡ
ಇಂದು ಕೂಡಿ ಬಂದ ವೇಳೆ
ಹೇಗೊ ಏನೊ ನಾಳೆ
ನಾ ಕಾಣೆ ನಾ ಕಾಣೆ ನನ್ನ ದೇವರಾಣೆ
ಭಲಾರೆ!
ಇವ ಭಾರಿ ಮೋಜುಗಾರ
ಭಲಾರೆ!
ಇವ ತೀರ ಮೋಸಗಾರ
ಭಲಾರೆ!
ಇವ ಭಾರಿ ಮೋಜುಗಾರ
ಭಲಾರೆ!
ಇವ ತೀರ ಮೋಸಗಾರ
ಆಹ ಆಹ ಆಹ ಆಹ ಆಹ
ದೂರದಿಂದ ಬಂದಂಥ ಸುಂದರಾಂಗ ಜಾಣ
ಆಸೆ ಬಳ್ಳಿ ಬೆಂಡಾಗಿ ಬಾಡಬಾರದು
ಬೀಳಬಾರದು ಕೀಳಬಾರದು
ಆಸೆ ಬಳ್ಳಿ ಬೆಂಡಾಗಿ ಬಾಡಬಾರದು
ಬೀಳಬಾರದು ಕೀಳಬಾರದು
ಬಂದುದೆಲ್ಲ ಮೇಲೆಂದು ಅಂದುಕೊಂಡರೆ
ಹೊಂದಿಕೊಂಡರೆ ಏನು ತೊಂದರೆ
ಅಂದಗಾರ ನೀನೆಂದು ಜಂಭ ಮಾಡಬೇಡ
ಕಂಬದಂತೆ ದೂರ ನಿಂತು ಹುಂಬ ನಾಗಬೇಡ
ಹೊಮ್ಮಿಬಂದ ಪ್ರೇಮವಲ್ಲೆ ಇಂಗಿ ಹೋದ ಮೇಲೆ
ನಾ ಕಾಣೆ ನಾ ಕಾಣೆ ನನ್ನ ದೇವರಾಣೆ
ಭಲಾರೆ!
ಇವ ಭಾರಿ ಮೋಜುಗಾರ
ಭಲಾರೆ!
ಇವ ತೀರ ಮೋಸಗಾರ
ಭಲಾರೆ!
ಇವ ಭಾರಿ ಮೋಜುಗಾರ
ಭಲಾರೆ!
ಇವ ತೀರ ಮೋಸಗಾರ
ಆಹ ಆಹ ಆಹ ಆಹ ಆಹ
ದೂರದಿಂದ ಬಂದಂಥ ಸುಂದರಾಂಗ ಜಾಣ



Autor(en): G.v. Iyer, G K Venkatesh


Attention! Feel free to leave feedback.