Songtexte Smarane Onde Saalade - Roopa-Deepa
ಸ್ಮರಣೆ ಒಂದೇ ಸಾಲದೆ ಗೋವಿಂದನ
ನಾಮ ಒಂದೇ ಸಾಲದೆ ||ಪಲ್ಲವಿ||
ಪರಮ ಪುರುಷನನ್ನು ನೆರೆ ನಂಬಿದವರಿಗೆ
ದುರಿತ ಬಾಧೆಗಳ ಗುರುತು ತೋರುವುದೆ ||
ಕಡು ಮೂರ್ಖನಾದರೇನು ದುಷ್ಕರ್ಮದಿಂ ತೊಡೆದಾತನಾದರೇನು
ಜಡನಾದರೇನಲ್ಪಜಾತಿಯಾದರೇನು
ಬಿಡದೆ ಪ್ರಹ್ಲಾದನ್ನ ಸಲಹಿದ ಹರಿಯ ||1||
ಪಾತಕಿಯಾದರೇನು ಸರ್ವಪ್ರಾಣಿ ಘಾತಕಿಯಾದರೇನು
ನೀತಿಯ ಬಿಟ್ಟು ದುಷ್ಕರ್ಮಿಯಾದರೇನು
ಪ್ರೀತಿಯಿಂದಜಾಮಿಳನ ಸಲಹಿದ ಹರಿಯ ||2||
ಸಕಲ ತೀರ್ಥಯಾತ್ರೆಯ ಮಾಡಿದಂಥ ನಿಖಿಲ ಪುಣ್ಯದ ಫಲವು
ಭಕುತಿ ಪೂರ್ವಕವಾಗಿ ಬಿಡದನುದಿನದಲ್ಲಿ
ಪ್ರಕಟ ಪುರಂದರ ವಿಠಲನ ನಾಮದ ||3||
Attention! Feel free to leave feedback.