Shreya Ghoshal - Doora Swalpa Doora Songtexte

Songtexte Doora Swalpa Doora - Shreya Ghoshal




ದೂರ (ದೂರ, ದೂರ)
ಸ್ವಲ್ಪ ದೂರ
ಬಂದು ನೋಡು ನನ್ನ ಜೊತೆಗೆ
ನಿಂತು (ನಿಂತು, ನಿಂತು)
ಸ್ವಲ್ಪ ನಿಂತು
ಒಮ್ಮೆ ನೋಡು ನನ್ನ ಕಡೆಗೆ
ನೀ ನೋಡುವಾಗ ನನಗೇನೇ ನಾನು ಸಿಗದೆ ಓಡುವೆನು
ಮಾತೊಂದು ತುಟಿಯ ಅಂಚಿನಲೇ ಕರಗಿ ಎಲ್ಲೋ ನೋಡುವೆನು
ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೆ, ನೀನೇ ನೋಡು (ನೀನೇ ನೋಡು)
ದೂರ, ಸ್ವಲ್ಪ ದೂರ ಬಂದು ನೋಡು ನನ್ನ ಜೊತೆಗೆ
ನಿಂತು, ಸ್ವಲ್ಪ ನಿಂತು ಒಮ್ಮೆ ನೋಡು ನನ್ನ ಕಡೆಗೆ
ನೀ ನೋಡುವಾಗ ನನಗೇನೇ ನಾನು ಸಿಗದೆ ಓಡುವೆನು
ಮಾತೊಂದು ತುಟಿಯ ಅಂಚಿನಲೇ ಕರಗಿ ಎಲ್ಲೋ ನೋಡುವೆನು
ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೆ
ನೀನೇ ನೋಡು, ನೋಡು, ನೋಡು
ನೀ ಮನದ ಒಳಗೆ ಇರುವೆ ಆದರೂ ನಿಲ್ಲುವೆ ದೂರ
ಓಹೋ, ನೀನಿರದ ಘಳಿಗೆ ನನಗೆ ಸಾವಿರ ಮುಳ್ಳಿನ ಹಾರ
ಹೇಳದೇನೇ ಅಪ್ಪಿಬಿಡಲೇನು?
ಒಂದು ಸಣ್ಣ ಮುತ್ತನಿಡಲೇನು?
ಕಣ್ಣ ಹನಿಯೊಂದು ಎಲ್ಲ ಹೇಳುತಿದೆ, ನೀನೇ ನೋಡು (ನೀನೇ ನೋಡು)
ದೂರ, ಸ್ವಲ್ಪ ದೂರ ಬಂದು ನೋಡು ನನ್ನ ಜೊತೆಗೆ
ನಿಂತು, ಸ್ವಲ್ಪ ನಿಂತು ಒಮ್ಮೆ ನೋಡು ನನ್ನ ಕಡೆಗೆ
ವಿರಹ ನಡುವೆ ಇರಲು ಯಾತಕೆ ಇಷ್ಟಿದೆ ಸಲಿಗೆ?
ಓ, ನಾ ನಗುವೆ, ನಗುತ ಇರುವೆ, ಆದರೂ ವೇದನೆ ನನಗೆ
ಒಂದು ಬಾರಿ ಅತ್ತುಬಿಡಲೇನು?
ತೋಳಿನಲ್ಲಿ ಸತ್ತುಬಿಡಲೇನು?
ಸಣ್ಣ ಹೃದಯವಿದು ತುಂಬ ನಡುಗುವುದು, ನೀನೇ ನೋಡು
ದೂರ, ಸ್ವಲ್ಪ ದೂರ ಬಂದು ನೋಡು ನನ್ನ ಜೊತೆಗೆ
ನಿಂತು, ಸ್ವಲ್ಪ ನಿಂತು ಒಮ್ಮೆ ನೋಡು ನನ್ನ ಕಡೆಗೆ
ನೀ ನೋಡುವಾಗ ನನಗೇನೇ ನಾನು ಸಿಗದೆ ಓಡುವೆನು
ಮಾತೊಂದು ತುಟಿಯ ಅಂಚಿನಲೇ ಕರಗಿ ಎಲ್ಲೋ ನೋಡುವೆನು
ಕಳ್ಳ ಕಣ್ಣುಗಳು ಸುಳ್ಳು ಹೇಳುತಿವೆ,
ನೀನೇ ನೋಡು, ನೋಡು, ನೋಡು



Autor(en): Yogaraj Bhat, Kokila Sadhu


Attention! Feel free to leave feedback.