Songtexte Kolalaadena (From "Savarnadeergha Sandhi" Original Motion Picture Soundtrack) - Shreya Ghoshal
ಕೊಳಲಾದೆನಾ ಕೃಷ್ಣಾ ನಿನ್ನ ಕೈಯಲ್ಲಿ
ಕಳೆದೋದೆನಾ ಗೋಪಿಲೋಲ ನಿನ್ನಲ್ಲಿ
ಹಗಲಿರುಳು ನಿನ್ನಗಾನ
ಸದಾ ನಿನ್ನದೇ ಧ್ಯಾನ
ನೀನೊಲಿದು ಬಂದ ದಿನ
ಅದೇ ನನಗೆ ಬಹುಮಾನ
ನಾವಿಲಾದೆನಾ ನಿಂತಾಗ ನಿನ್ನೆದುರಲ್ಲಿ
ಏನೋ ಕಂಪನಾ ನವಿರಾಗಿ ನನ್ನೆದೆಯಲ್ಲಿ
ಕೊಳಲಾದೆನಾ ಕೃಷ್ಣಾ ನಿನ್ನ ಕೈಯಲ್ಲಿ
ಮಾಧವನು ನೀನು ನಿನ ರಾಧೆ ನಾನು
ಬಳಿ ಬರಲು ನಾಚಿ ನೀರಾದೆ ನಾನು
ನನ್ನೆದೆಯ ತುಂಬೆಲ್ಲಾ ನಿನ್ನೊಲವ ಶೃಂಗಾರ
ಪ್ರಣಯಾಂತರಂಗದಲಿ ಸವಿ ಭಾವ ಸಂಚಾರ
ಪ್ರಣಯಾಂತರಂಗದಲಿ ಸವಿ ಭಾವ ಸಂಚಾರ
ಸೌಂದರ್ಯ ಸಾಕಾರ
ಕೊಳಲಾದೆನಾ ಕೃಷ್ಣಾ ನಿನ್ನ ಕೈಯಲ್ಲಿ
ಕಳೆದೋದೆನಾ ಗೋಪಿಲೋಲ ನಿನ್ನಲ್ಲಿ
ಈ ನನ್ನ ಜೀವ ನಿನಗೆಂದೇ ತಾನೆ
ಅಂದಾಗಲೆಲ್ಲ ತುಂಟ ನಗುತಾನೆ
ನಿನ ಶಿರದ ಸಿಂಗಾರ ನವಿಲುಗರಿ ನಾನಾದೆ
ಯಾರೇನೇ ಅಂದರೂ ನಾ ನಿನಗೊಬ್ಬಳೇ ರಾಧೆ
ಯಾರೇನೇ ಅಂದರೂ ನಾ ನಿನಗೊಬ್ಬಳೇ ರಾಧೆ
ನಾನೊಬ್ಬಳೇ ರಾಧೆ
ಕೊಳಲಾದೆನಾ ಕೃಷ್ಣಾ ನಿನ್ನ ಕೈಯಲ್ಲಿ
ಕಳೆದೋದೆನಾ ಗೋಪಿಲೋಲ ನಿನ್ನಲ್ಲಿ
ಹಗಲಿರುಳು ನಿನ್ನಗಾನ
ಸದಾ ನಿನ್ನದೇ ಧ್ಯಾನ
ನೀನೊಲಿದು ಬಂದ ದಿನ
ಅದೇ ನನಗೆ ಬಹುಮಾನ
ನಾವಿಲಾದೆನಾ ನಿಂತಾಗ ನಿನ್ನೆದುರಲ್ಲಿ
ಏನೋ ಕಂಪನಾ ನವಿರಾಗಿ ನನ್ನೆದೆಯಲ್ಲಿ
ಕೊಳಲಾದೆನಾ ಕೃಷ್ಣಾ ನಿನ್ನ ಕೈಯಲ್ಲಿ

Album
Kolalaadena (From "Savarnadeergha Sandhi" Original Motion Picture Soundtrack)
Veröffentlichungsdatum
06-09-2019
Attention! Feel free to leave feedback.