Shreya Ghoshal - Thanmayaladenu (From "Paramathma") Songtexte

Songtexte Thanmayaladenu (From "Paramathma") - Shreya Ghoshal




ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ನಿನ್ನಲ್ಲಿ ಜೀವವನ್ನು ಅಡವಿಟ್ಟು ಬಂದೆ ನಾನು
ಕಣ್ಮುಚ್ಚಿಯೇ ನಾನೋದಲೇ ಪುಟವೊಂದನು ಹರಿಯುವ ಮುನ್ನವೇ
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ತಪ್ಪು ತಿಳಿಯಬೇಡ ನೀನು ಕನಸಿನಲ್ಲಿ ಕಂಡರೆ
ಬೇರೆ ಏನು ಹೇಳುವಾಗ ಕಣ್ಣು ತುಂಬಿ ಬಂದರೆ
ಮನಸಿಗೆ ಭಾಸವು ಅಲ್ಲೀ ನೀನು ನನ್ನ ಕೂಗಿದಂತೆ
ಸಣ್ಣ ಸಲ್ಲಾಪವನ್ನು ಒಂಟಿಯಾಗಿ ನಡೆಸುತ್ತ ನಾನಿಂತೆ
ಮನಸಲ್ಲಿ ಅಂದ ಮಾತು ತಡವಾಗಿ ಕೇಳಿತೇನು
ಗೊತ್ತಿಲ್ಲದೇ ನಾಗೀಚಲೇ ಹೆಸರೊಂದನು ಅಳಿಸುವ ಮುನ್ನವೇ
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ನ...
ನಾನ ನಾನ ನಾನ
ಪ್ರತಿಸಲ ಬಾಗಿಲ ಸದ್ದಿಗೆ ಎದೆಯಲಿ ಸ್ಪಂದನ
ತೆರೆದರೆ ಬೀಸುವ ಗಾಳಿಯೂ ಹೇಳಿದೆ ಸಾಂತ್ವನ
ನನ್ನ ವಿರಹವೂ ನಿನ್ನಿಂದ ಇನ್ನು ಚೆಂದ
ವಿವರಿಸಲಾರೆ ಎಲ್ಲಾ ನಾ ದೂರದಿಂದ
ನೆನಪನ್ನು ರಾಶಿಹಾಕಿ ಎಣಿಸುತ್ತ ಕೂರಲೇನು
ಕನ್ನಡಿಯಲ್ಲಿ ನಾ ಹುಡುಕಲೇ ನಗುವೊಂದನು ಉರಿಸುವ ಮುನ್ನವೇ
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ




Attention! Feel free to leave feedback.