Sonu Nigam - Ee Sanje Yakagide - From "Geleya" Songtexte

Songtexte Ee Sanje Yakagide - From "Geleya" - Sonu Nigam




ಸಂಜೆ ಯಾಕಾಗಿದೆ
ನೀನಿಲ್ಲದೆ
ಸಂಜೆ ಯಾಕಾಗಿದೆ
ಸಂತೆ ಸಾಕಾಗಿದೆ
ನೀನಿಲ್ಲದೆ
ಸಂತೆ ಸಾಕಾಗಿದೆ
ಏಕಾಂತವೆ ಆಲಾಪವು
ಏಕಾಂಗಿಯ ಸಲ್ಲಾಪವು
ಮೌನ ಬಿಸಿಯಾಗಿದೆ... ಓ...
ಮೌನ ಬಿಸಿಯಾಗಿದೆ...
ಸಂಜೆ ಯಾಕಾಗಿದೆ
ನೀನಿಲ್ಲದೆ
ಸಂಜೆ ಯಾಕಾಗಿದೆ
ನೋವಿಗೆ ಕಿಡಿ ಸೋಕಿಸಿ
ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ
ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವು ಹೂವಾಗಿದೆ
ಮೈಯೆಲ್ಲವೂ ಮುಳ್ಳಾಗಿದೆ
ಜೀವ ಕಸಿಯಾಗಿದೆ... ಓ...
ಜೀವ ಕಸಿಯಾಗಿದೆ...
ಸಂಜೆ ಯಾಕಾಗಿದೆ
ನೀನಿಲ್ಲದೆ
ಸಂಜೆ ಯಾಕಾಗಿದೆ
ನೀನಿಲ್ಲದೆ ಚಂದಿರಾ
ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ
ಬೆಳದಿಂಗಳು ಅಸು ನೀಗಿದೆ
ಆಕಾಶದಿ ಕಲೆಯಾಗಿದೆ
ಸಂಜೆಯ ಕೊಲೆಯಾಗಿದೆ
ಗಾಯ ಹಸಿಯಾಗಿದೆ... ಗಾಯ
ಹಸಿಯಾಗಿದೆ...
ಸಂಜೆ ಯಾಕಾಗಿದೆ
ನೀನಿಲ್ಲದೆ
ಸಂಜೆ ಯಾಕಾಗಿದೆ
ಸಂತೆ ಸಾಕಾಗಿದೆ
ನೀನಿಲ್ಲದೆ
ಸಂತೆ ಸಾಕಾಗಿದೆ
ಏಕಾಂತವೆ ಆಲಾಪವು
ಏಕಾಂಗಿಯ ಸಲ್ಲಾಪವು
ಮೌನ ಬಿಸಿಯಾಗಿದೆ... ಓ...
ಮೌನ ಬಿಸಿಯಾಗಿದೆ...
ಸಂಜೆ ಯಾಕಾಗಿದೆ
ನೀನಿಲ್ಲದೆ
ಸಂಜೆ ಯಾಕಾಗಿದೆ




Attention! Feel free to leave feedback.