Vasuki Vaibhav - Kaagadada Doniyalli Songtexte

Songtexte Kaagadada Doniyalli - Vasuki Vaibhav




ಕಾಗದದ ದೋಣಿಯಲ್ಲಿ ನಾ ಕೂರುವಂತ ಹೊತ್ತಾಯಿತೇ
ಕಾಣಿಸದ ಹನಿಯೊಂದು ಕಣ್ಣಲ್ಲೇ ಕೂತು ಮುತ್ತಾಯಿತೇ
ಹಗುರಾದೀತೇನೋ ನನ್ನೆದೆಯ ಭಾರ
ಕಂಡಿತೇನೋ ತಂಪಾದ ತೀರ
ಸಿಕ್ಕೀತೆ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ
ಹಾದಿಯಲಿ ಹೆಕ್ಕಿದ ನೆನಪಿನ ಪುಟ್ಟ ಜೋಳಿಗೆ ಬೆನ್ನಲ್ಲಿದೆ
ಆಡದಿರೋ ಸಾವಿರ ಪದಗಳ ಮೂಕ ಸೇತುವೆ ಕಣ್ಮುಂದಿದೆ
ಹೆಜ್ಜೆಯ ಗುರುತೆಲ್ಲವ ಅಳಿಸುತ್ತಿರೋ ಮಳೆಗಾಲವೇ
ನಾ ನಿನ್ನಯ ಮಡಿಲಲ್ಲಿರೋ ಬರಿಗಾಲಿನ ಮಗುವಾಗುವೆ
ಮನಸಾದೀತೇನೋ ಇನ್ನೂ ಉದಾರ
ಬಂದೀತೇನೋ ನನ್ನಾ ಬಿಡಾರ
ಸಿಕ್ಕೀತೆ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ



Autor(en): Jayanth Kaikini


Attention! Feel free to leave feedback.