Chandru Obaiah feat. Raghu Dixit - Kannada - From "Trigger" Lyrics

Lyrics Kannada - From "Trigger" - Raghu Dixit , Chandru Obaiah



ಸುಂದರಕ್ಕಿಂತ ಸುಂದರವಾದ
ಕನ್ನಡನಾಡು ನಮ್ಮ ನಾಡು
ಮಾಧುರ್ಯಕ್ಕಿಂತ ಮಾಧುರ್ಯವಾದ
ಕನ್ನಡ ಭಾಷೆ ಕೇಳಿ ನೋಡೂ
ಕನ್ನಡ ಕನ್ನಡ ಕನ್ನಡ ಕನ್ನಡ
ಸುಂದರಕ್ಕಿಂತ ಸುಂದರವಾದ
ಕನ್ನಡನಾಡು ನಮ್ಮ ನಾಡು
ಕಾಡಿನ ಹಸಿರೇ ಸೀರೆಯ ಸೆರಗು
ಜೋಗದ ನೆರಿಗೆ ಪಾದದ ವರೆಗು
ಮುಂಜಾನೆ ಮಂಜೆಲ್ಲ ಮುತ್ತಿನ ಸರವು
ಹೇಳೋಕೆ ಪದವಿಲ್ಲ ಕನ್ನಡ ಚೆಲುವು
ಸ್ವರ್ಗ ನೇ ನಮ್ಮ ನಾಡು
ಕನ್ನಡ ಉಸಿರಾಗಲಿ
ಕನ್ನಡ ಬದುಕಾಗಲಿ
ಸುಂದರಕ್ಕಿಂತ ಸುಂದರವಾದ
ಕನ್ನಡನಾಡು ನಮ್ಮ ನಾಡು
ಮಾಧುರ್ಯಕ್ಕಿಂತ ಮಾಧುರ್ಯವಾದ
ಕನ್ನಡ ಭಾಷೆ ಕೇಳಿ ನೋಡೂ
ಕನ್ನಡ ಕನ್ನಡ ಕಸ್ತೂರಿ ಕನ್ನಡ
ಕಸ್ತೂರಿ ತಿಲಕ ತಾಯಿಯ ಹಣೆಗೆ
ಪಂಪನ ಕವಿತೆ ಹೂಗಳ ಮುಡಿಗೆ
ನವಿಲು ಗರಿಯೇ
ಕನ್ನಡತಿ ಚುಮುಕಿ
ಕನ್ನಡದ ಅಭಿಮಾನ
ಎದೆ ತುಂಬಿ ತುಳುಕಿ
ಬಂಗಾರ ನಮ್ಮ ನಾಡು
ಕನ್ನಡ ಧನಿಯಾಗಲಿ
ಕನ್ನಡ ಗೆಲುವಾಗಲಿ
ಸುಂದರಕ್ಕಿಂತ ಸುಂದರವಾದ
ಕನ್ನಡನಾಡು ನಮ್ಮ ನಾಡು
ಮಾಧುರ್ಯಕ್ಕಿಂತ ಮಾಧುರ್ಯವಾದ
ಕನ್ನಡ ಭಾಷೆ ಕೇಳಿ ನೋಡೂ
ಕನ್ನಡ ಕನ್ನಡ ಕಸ್ತೂರಿ ಕನ್ನಡ




Chandru Obaiah feat. Raghu Dixit - Best of Raghu Dixit - Kannada Hits 2016
Album Best of Raghu Dixit - Kannada Hits 2016
date of release
06-06-2016



Attention! Feel free to leave feedback.