Charanraj & Siddhartha Belmannu - Badukina Bannave Lyrics

Lyrics Badukina Bannave - Charanraj & Siddhartha Belmannu




ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ
ಬಡವನ ಕಣ್ಣಲು ಬೆಳಕಾದರೇ ಅದು ಪ್ರೇಮವೇ
ಕೊರಳಿದು ಕಂಪಿಸಿ ಬಿಗಿಯಾದರೆ ಅದು ಪ್ರೇಮವೇ
ತಿರುವಲಿ ದೇವರೇ ಎದುರಾದರೆ ಅದು ಪ್ರೇಮವೇ
ಗಾಳಿಯಲಿ ಬೆಚ್ಚನೆ ಅಲೆಯಿದೆ
ಹೃದಯಕೆ ಹೇಗೋ ದಾರಿ ಗೊತ್ತಾಗಿದೆ
ನಕ್ಷೆಯಾ ನೀಡದೆ
ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ
ಬಡವನ ಕಣ್ಣಲು ಬೆಳಕಾದರೇ ಅದು ಪ್ರೇಮವೇ
ತಲುಪದ ಕರೆ ನೂರಾರಿವೆ
ಬೆರಳಲೇ ಇದೆ ಸಂಭಾಷಣೆ
ಕನಸಿಗು ಸಹ ಕಂದಾಯವೇ
ವಿರಹವೆ ಕಿರು ಸಂಭಾವನೆ
ಕಳೆದರೆ ನೀನು
ಉಳಿವೆನೆ ನಾನು
ನೆಪವಿರದೆ ನಿನ್ನ
ಅಪಹರಿಸಿ ತಂದೆ
ಉಪಕರಿಸು ಶಿಕ್ಷೆಯಾ ನೀಡದೆ
ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ
ಬಡವನ ಕಣ್ಣಲು ಬೆಳಕಾದರೇ ಅದು ಪ್ರೇಮವೇ
ಕೊರಳಿದು ಕಂಪಿಸಿ ಬಿಗಿಯಾದರೆ ಅದು ಪ್ರೇಮವೇ
ತಿರುವಲಿ ದೇವರೇ ಎದುರಾದರೆ ಅದು ಪ್ರೇಮವೇ



Writer(s): Jayanth Kaikini, Charanraj




Attention! Feel free to leave feedback.