Sonu Nigam - Muddagi Neenu - From "Ganapa" Lyrics

Lyrics Muddagi Neenu - From "Ganapa" - Sonu Nigam



ಮುದ್ದಾಗಿ ನೀನು ನನ್ನ ಕೂಗಿದೆ
ಸದ್ದಿಲ್ಲದೇನೆ ಸುದ್ಧಿಯಾಗಿದೆ
ಇಂದಲ್ಲ ನಾಳೆ ಏನೋ ಕಾದಿದೆ
ನಿಂತಲ್ಲೆ ಒಂದು ಮಿಂಚು ತಾಗಿದೆ
ಒಂದಲ್ಲ ಒಂದು ಆಸೆ ಮೂಡಿದೆ
ಇಂದಲ್ಲ ನಾಳೆ ಏನೋ ಕಾದಿದೆ
ಕನಸಲ್ಲಿ ಕಂಡ ನಂತರ
ಭಯವೆಲ್ಲಾ ಮಾಯವಾಗಿದೆ
ನನವನ್ನು ತುಂಬಿಕೂಳ್ಳಲು
ಹ್ಋದಯಾನು ಸಾಲದಾಗಿದೆ
ಮೊದಲೇನೆ ಹೇಳಿ ಬಿಡುವೆನು
ನನಗಂತು ಪ್ರೀತಿಯಾಗಿದೆ
ಅಲೆಮಾರಿಯಾದ ಜೀವದ
ಮನವೀಗ ಸೂರೆಯಾಗಿದೆ
ಉಳಿತಾಯ ಇಲ್ಲದಿದ್ದರೂ
ಒಲವೊಂದೆ ಆಸ್ತಿಯಾಗಿದೆ
ಸಿರಿಯಲ್ಲಿ ಸಿಕ್ಕ ಮೇಲೆಯೇ
ಪರದಾಟ ಜಾಸ್ತಿಯಾಗಿದೆ
ಮುದ್ದಾಗಿ ನೀನು ನನ್ನ ಕೂಗಿದೆ
ಸದ್ದಿಲ್ಲದೇನೆ ಸುದ್ಧಿಯಾಗಿದೆ
ಇಂದಲ್ಲ ನಾಳೆ ಏನೋ ಕಾದಿದೆ
ನಿಂತಲ್ಲೆ ಒಂದು ಮಿಂಚು ತಾಗಿದೆ
ಒಂದಲ್ಲ ಒಂದು ಆಸೆ ಮೂಡಿದೆ
ಇಂದಲ್ಲ ನಾಳೆ ಏನೋ ಕಾದಿದೆ
ಬೆರಗಾಗಿ ನೀನು ಕಚ್ಚಿದ
ಬೆರಳೆಷ್ಟು ಪುಣ್ಯ ಮಾಡಿದೆ
ನೆರಳಲ್ಲಿ ನೀನು ನಿಂತಿರೊ
ಮರ ಕೂಡ ಧನ್ಯವಾಗಿದೆ
ಪದವಾಗಿ ನಿನ್ನ ಕೊರಳಲಿ
ಇರುವಂತ ಆಸೆಯಾಗಿದೆ
ಸೆಳೆತಕ್ಕೆ ಸಿಕ್ಕ ನನ್ನಯ
ನಡಿಗೇನೆ ಬೇರೆಯಾಗಿದೆ
ಬರಿಶುದ್ಧ ಒಂಟಿ ಜೀವನ
ನಿಜವಾಗಿ ಬೇಡವಾಗಿದೆ
ಚೆಲುವೇ ನೀ ಹೇಳು ಬೇಗನೆ
ನಿನಗೂನು ಹೀಗೆ ಆಗಿದೆ
ಮುದ್ದಾಗಿ ನೀನು ನನ್ನ ಕೂಗಿದೆ
ಸದ್ದಿಲ್ಲದೇನೆ ಸುದ್ಧಿಯಾಗಿದೆ
ಇಂದಲ್ಲ ನಾಳೆ ಏನೋ ಕಾದಿದೆ
ನಿಂತಲ್ಲೆ ಒಂದು ಮಿಂಚು ತಾಗಿದೆ
ಒಂದಲ್ಲ ಒಂದು ಆಸೆ ಮೂಡಿದೆ
ಇಂದಲ್ಲ ನಾಳೆ ಏನೋ ಕಾದಿದೆ



Writer(s): karan. b. krupa, jayanth kaykini


Sonu Nigam - Sonu Nigam - Melodies - Kannada Hits - 2016
Album Sonu Nigam - Melodies - Kannada Hits - 2016
date of release
22-02-2016




Attention! Feel free to leave feedback.