Kapil Nair - Baduke Neenentha Nataka paroles de chanson

paroles de chanson Baduke Neenentha Nataka - Kapil Nair




ನನ್ನ ಕನಸೆಲ್ಲ ಈಗ ಚೂರಾದ ಕನ್ನಡಿ
ಸದ್ದೇ ಮಾಡುತ್ತಿಲ್ಲ ಯಾಕೋ ಕಣ್ಣೀರನ ನುಡಿ
ಅನಿರೀಕ್ಷಿತ ಬಾಳಿನ ಕ್ಷಣಗಳೆಲ್ಲ
ವಿಧಿ ಸೂಚಿತ ನಾಳಿನ ಗುಣಗಳೆಲ್ಲ
ಹುಡುಕಾಟವೇನೇ ಜೀವನ
ಶುರುವಾಗೋ ಮುನ್ನ ಈಗ ಕೊನೆಯಾಗುವಂತೆ ಕಾಣೋ
ಬದುಕೇ ನೀನೆಂತ ನಾಟಕ???
ತಿಳಿಸೋರು ಯಾರು ಈಗ
ಅರ್ಥವಾಗದಂತ ರಾಗ
ಮೌನಾನೇ ಇದರ ಗಾಯಕs
ಬಿರುಗಾಳಿಯು ಪ್ರಳಯದ ಪಾತ್ರಧಾರಿ
ದಿಕ್ಕಿಲ್ಲದೇ ಬಂದಿದೆ ನನ್ನ ದಾರಿ
ಹೃದಯವು ನೋವಿಗೆ ರಾಯಭಾರಿ
ಬೆಳೆಸುತ್ತಿದೆ ಅಂತರ ಎಲ್ಲೇ ಮೀರಿ
ಮುಂಜಾನೆಯು ಸರಿದು ನಡೆದಾಗ ದೂರ
ಬೆಳೆಕಿನ್ನು ಎಲ್ಲಿ ಗೋಚರ
ಶುರುವಾಗೋ ಮುನ್ನ ಈಗ ಕೊನೆಯಾಗುವಂತೆ ಕಾಣೋ
ಬದುಕೇ ನೀನೆಂತ ನಾಟಕ
ತಿಳಿಸೋರು ಯಾರು ಈಗ
ಅರ್ಥವಾಗದಂತ ರಾಗ
ಮೌನಾನೇ ಇದರ ಗಾಯಕ
ಅನುವಾದವೇ ಇಲ್ಲದ ಮೌನವೊಂದು
ಜೊತೆಯಾಗಿದೆ ಬಾಳಿಗೆ ನೋವ ತಂದು
ನೇರಳಾಗಿದೆ ಕತ್ತಲ ಮಾರುವೇಷ
ಬಿಸಿ ಉಸಿರಲಿ ಸಂತಸ ಸರ್ವನಾಶ
ಏಕಾಂತದಿ ಬಿಕ್ಕಿ ಅಳುವಾಗ ಜೀವ
ಅನುರಾಗಕಿಲ್ಲ ಎಚ್ಚರ
ಹೊಸದಾದ ನೋವಿಗೊಂದು
ಹೊಸೆದಂತೆ ಬಾಳಾನಿಂದು
ನೆನಪಿಲ್ಲ ಸೇರಿ ಸ್ಮಾರಕಾ
ಶುರುವಾಗೋ ಮುನ್ನ ಈಗ ಕೊನೆಯಾಗುವಂತೆ ಕಾಣೋ
ಬದುಕೇ ನೀನೆಂತ ನಾಟಕ




Kapil Nair - Happy New Year (Original Motion Picture Soundtrack)



Attention! N'hésitez pas à laisser des commentaires.
//}