Raghavendra Rajkumar - Sagarave Sagarave paroles de chanson

paroles de chanson Sagarave Sagarave - Raghavendra Rajkumar



ಆಹಹಾ...
ಆಹಹಾ...
ಆಹಹಾ...
ಆಹಹಾ...
ಆಹಹಾ...
ಆಹಹಾ...
ಆಹಹಾ...
ಆಹಹಾ...
ಸಾಗರವೇ... ಸಾಗರವೇ...
ಕಂಬನಿಯಾ ಆಗರವೇ...
ದಣಿವೇ ಇಲ್ಲಾ ನಿನ್ನ ಅಲೆಗೆ
ದಣಿವೇ ಇಲ್ಲಾ ನನ್ನ ಎದೆಗೆ
ಹಾಡುವೆ ನಿನ್ನ ಹಾಗೆ ನನ್ನ ಹೂವಿಗಾಗಿ
ಸಾಗರವೇ... ಸಾಗರವೇ...
ಕಂಬನಿಯಾ ಆಗರವೇ...
ಚಾತಕ ಪಕ್ಷಿ ಆಗಸ ನೋಡಿ
ನೀರಿನ ಹನಿಗೆ ಕಾಯದೇ
ಚಕೋರ ಪಕ್ಷಿ ಪೌರ್ಣಮಿಗಾಗಿ
ಕತ್ತಲೆ ಊರ ನೋಡದೇ
ನಂಬಿಕೆಯೆಂಬ ಸಾಗರದಲ್ಲಿ
ಪ್ರಾರ್ಥನೆಯೆಂಬ ಆಸರೆಯಲ್ಲಿ
ಪಯಣ ಹೊರಟಿರುವೇ...
ಕೊನೆಗೆ ಜಯ ತರುವೇ...
ದಣಿವೇ ಇಲ್ಲಾ ನನ್ನ ಎದೆಗೆ
ದಣಿವೇ ಇಲ್ಲಾ ನಿನ್ನಾ ಅಲೆಗೆ
ಹಾಡುವೆ ನಿನ್ನ ಹಾಗೆ ನನ್ನ ಹೂವಿಗಾಗಿ
ಸಾಗರವೇ... ಸಾಗರವೇ...
ಕಂಬನಿಯಾ ಆಗರವೇ...
ಜೀವನ ಸಿಂಧು ನಿನ್ನಾ ಎದುರು
ಬಿಂದುಗಳೆರಡು ನಮ್ಮದು
ಉಪ್ಪಿನ ನೀರೆ ನಿನ್ನಾ ಮನಕೆ
ಕಂಬನಿ ಬಿಸಿಯು ಸೋಕದು
ಕಡಲ ಆಣೆ ಮರಳ ಆಣೆ
ಇಲ್ಲಿ ಬೀಸೋ ಗಾಳಿ ಆಣೆ
ಬಯಸೊ ಪ್ರೇಮಿಗಳಾ...
ಹರಸೊ ವಿಧಿ ಎದುರು...
ನೀ ಬಾಡದಿರು... ನೀ ಆರದಿರೂ...
ನೀ ಆರದಿರೂ... ನೀ ಬಾಡದಿರೂ...
ಮಲ್ಲಿಗೆ ಅಂಗಳದ ಮಂಗಳದ ಆರತಿ
ನೀನಿದ್ದರೇ ನಾ ಹಾಡುವೆ
ನೀನಿದ್ದರೇ ನಾ ಬಾಳುವೆ
ಅನುರಾಗದಲೆಗಳ ಮೇಲೆ...
ಸಂಗೀತ ಸ್ವರಗಳ ಲೀಲೆ...
ನಡೆದಾಗ ಜೀವನ ಗಾನ ರಸಪೂರ್ಣವು...
ಪ್ರೇಮಾ...
ಉಸಿರಾಗು ಬಾ...
ವರವಾಗಿರೂ...



Writer(s): Hamsalekha


Raghavendra Rajkumar - Anuraagada Alegalu (Original Motion Picture Soundtrack)




Attention! N'hésitez pas à laisser des commentaires.