S. P. Balasubrahmanyam - Snehakke Sneha (From "Sipayi") paroles de chanson

paroles de chanson Snehakke Sneha (From "Sipayi") - S. P. Balasubrahmanyam




ಹೇ ನಮಸ್ತೆ ಕರುನಾಡಿಗೆ
ಚಿರಕಾಲ ಇರಲಿ ಸ್ನೇಹ
ಚಿರಕಾಲ ಇರಲಿ ಪ್ರೇಮ
ಚಿರಕಾಲ ಇರಲಿ ಹಾಡು
ಚಿರಕಾಲ ಇರಲಿ ನೆನಪು ||೨||
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಲೋಕದಲ್ಲಿ ಸ್ನೇಹ ಚಿರಂಜೀವಿ ಹಾಡು ಬಾರೊ ಪ್ರೇಮ ಜೀವಿ
ಚಿರಕಾಲ ಇರಲಿ ಸ್ನೇಹ
ಚಿರಕಾಲ ಇರಲಿ ಪ್ರೇಮ
ಚಿರಕಾಲ ಇರಲಿ ಹಾಡು
ಚಿರಕಾಲ ಇರಲಿ ನೆನಪು
ಪಕ್ಕದ ಊರು ನನ್ನೂರು ಹಿಂದೊಮ್ಮೆ ಎರಡು ಒಂದೂರು
ಇಲ್ಲಿನ ಜನರು ನಿನ್ನೋರು ಒಂದಾಗಿ ಇರುವ ಅನ್ನೋರು
ನಿಮ್ಮೂರ ದಾಸಪದ ನಮ್ಮೂರಲ್ಲಿ
ನಿಮ್ಮೂರ ಜಾನಪದ ನಮ್ಮೂರಲ್ಲಿ
ತಿಮ್ಮ ನಿಮ್ಮವನು ರಾಯ ನಮ್ಮವನು ನಮ್ಮ ದೇವರೊಂದೆ
ನಾನು ನಿಮ್ಮವನು ನೀನು ನಮ್ಮವನು ನಮ್ಮ ಆಸೆ ಒಂದೆ
ಸ್ನೇಹ ಜ಼ಿಂದಾಬಾದ್ ಪ್ರೀತಿ ಜ಼ಿಂದಾಬಾದ್
ಸಾವಿರ ವರುಷ ಹಾಯಾಗಿ ಬಾಳಿರಿ ನೀವು ಒಂದಾಗಿ
ನಮ್ಮಯ ಅತಿಥಿ ನೀವಾಗಿ ತುಂಬಿದೆ ಹೃದಯ ತಂಪಾಗಿ
ನಮ್ಮೂರ ಚಂದಿರನೆ ನಿಮ್ಮೂರಲ್ಲಿ ನಮ್ಮೂರ ಮನ್ಮಥನೆ ನಿಮ್ಮೂರಲ್ಲಿ
ಅಲ್ಲೂ ಸ್ನೇಹವಿದೆ ಇಲ್ಲೂ ಸ್ನೇಹವಿದೆ ಎಲ್ಲಾ ಸ್ನೇಹವೊಂದೆ
ಅಲ್ಲೂ ಪ್ರೀತಿಯಿದೆ ಇಲ್ಲೂ ಪ್ರೀತಿಯಿದೆ ಎಲ್ಲಾ ಪ್ರೀತಿ ಒಂದೆ



Writer(s): hamsalekha


Attention! N'hésitez pas à laisser des commentaires.