Sadhu Kokila - Amma (Bonus Track) paroles de chanson

paroles de chanson Amma (Bonus Track) - Sadhu Kokila




ಅಮ್ಮ ನನ್ನ ಜನುಮ ನಿನ್ನ ವರದಾನವಮ್ಮ
ಅಮ್ಮ ನಿನಗ್ಯಾರು ಸಮ ನನ್ನ ಜಗ ನೀನೆಯಮ್ಮ
ನಿನ್ನ ಲಾಲಿ ಪದ
ನನ್ನ ಒಳಗೆ ಸದಾ
ನಿನದೆ ಮಿಡಿದಿದೆ ಅಮ್ಮಾ
ಗುಡಿಯ ಹಂಗಿರದ ಕೀರ್ತನೆ ಬೇಕಿರದ
ನಡೆವ ದೈವವೇ ಅಮ್ಮಾ
ಅಮ್ಮ ನನ್ನ ಜನುಮ ನಿನ್ನ ವರದಾನವಮ್ಮ
ಅಮ್ಮ
ನಿನ್ನ ಒಂದು ಕೈತುತ್ತು ಸಾಕು ಜನ್ಮ ಪೂರ್ತಿ ಉಪವಾಸ ಇರುವೆನು
ನಿನ್ನ ಒಂದು ಅಪ್ಪುಗೆಯು ಸಾಕು ನೆನಪಿನಲ್ಲೇ ಸೆರೆವಾಸ ಇರುವೆನು
ನೀನೇ ನನ್ನ ಲೋಕವು ನೀನೇ ನನ್ನ ಜೀವವು ನೀನೇ ನನಗೆ ಎಲ್ಲವೂ ಅಮ್ಮಾ...
ಅಮ್ಮಾ ನನ್ನ ಜನುಮ ನಿನ್ನ ವರದಾನವಮ್ಮ
ಅಮ್ಮಾ...
ರಾ ರಿ ರಿ ರೋ... ರಾ ರಿ ರಿ ರೋ...
ನಿನ್ನ ಒಂದು ಸಾಂತ್ವಾನವೇ ಸಾಕು ನೋವನೆಲ್ಲಾ ನಾ ನುಂಗಿ ನಗುವೇನು
ನಿನ್ನ ಒಂದು ಬೆಂಬಲವೂ ಸಾಕು ಜಗವನೆಲ್ಲಾ ನಾ ಗೆದ್ದು ಬರುವೆನು
ನೂರು ನೂರು ದೇವರು ನಿನ್ನ ಒಳಗೆ ಇರುವರು ಎಂಬ ನಿಜವ ಮರೆತೇನು ಅಮ್ಮಾ ...
ಅಮ್ಮಾ ...ನನ್ನ ಜನುಮ ನಿನ್ನಾ ವರದಾನವಮ್ಮ
ಅಮ್ಮ ನಿನಗ್ಯಾರು ಸಮ ನನ್ನ ಜಗ ನೀನೆಯಮ್ಮಾ ...
ನಿನ್ನ ಲಾಲಿ ಪದ ನನ್ನ ಒಳಗೆ ಸದಾ ಬಿಡದೆ ಮಿಡಿದಿದೆಯಮ್ಮಾ
ಗುಡಿಯ ಹಂಗಿರದ ಕೀರ್ತನೆ ಬೇಕಿರದ ನಡೆವ ದೈವವೇ ಅಮ್ಮಾ
ಅಮ್ಮಾ...



Writer(s): Gurukiran, V.nagendra Prasad



Attention! N'hésitez pas à laisser des commentaires.