Sreya Jayadeep - Rekkaya - Solo paroles de chanson

paroles de chanson Rekkaya - Solo - Sreya Jayadeep




ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ ಅವನ ಪ್ರೀತಿ ಬೇಕೆನಗೆ
ಮೀನುಗೋ ಚುಕ್ಕಿಗಳನ್ನು ತರುವ ಅಪ್ಪನು ಬೇಡ ಅವನ ಸನಿಹ ಬೇಕೆನಗೆ
ಕಲ್ಪನೆಯ ಕುದುರೆಗಳು ಕ್ಷಣದಲಿ ಮಾಯಾ
ಹಗಲಿನಲಿ ತಾರೆಗಳು ಹೇಳದೆ ಮಾಯಾ
ಅಂತ ಕುದುರೆ ತಾರೆ ಇಲ್ಲ ನಂಗೆಯಾಕಪ್ಪಾ
ಇಂದು ನನ್ನ ಜೊತೆ ಇರೋ ಅಪ್ಪ ಬೇಕಪ್ಪಾ
ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ ಅವನ ಪ್ರೀತಿ ಬೇಕೆನಗೆ
ಅವನ ಸನಿಹ ಬೇಕೆನಗೆ
ಸಾಲಕ್ಕೆ ಸಿಗುವಂತ ಇಂದ್ರನ ಆನೆಯು ನನಗೆ ಬೇಕಿಲ್ಲಾ
ನನ್ನೊಡನೆ ನಗುತಾ ಮುದ್ದಿಸಿ ಆಡುವ ಅಪ್ಪಾ ಬೇಕಪ್ಪಾ
ಹಗಲು ಬಂದರೆ ಮಾಸುವ ಹುಣ್ಣಿಮೆ ನನಗೆ ಬೇಕಿಲ್ಲಾ
ಅದಕ್ಕಿಂತ ಹೆಚ್ಚಿನ ತಂಪನ್ನು ನೀಡುವ ಅಪ್ಪ ಬೇಕಪ್ಪಾ
ಬೇಡವೇ ಬೇಡ ಕಾಮನಬಿಲ್ಲು ಮಳೆಯು ಸುರಿದರೆ ಅದರ ಬಣ್ಣವು ಕರಗದೇ
ಎಂದೆಂದು ಕರಗದ ನಿನ್ನಾ ಒಲುಮೆ ಬೇಕಿದೇ
ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ ಅವನ ಪ್ರೀತಿ ಬೇಕೆನಗೆ
ಕಣ್ಣಿಗೆ ಕಾಣದ ಗಂಧರ್ವ ಲೋಕದ ಅಪ್ಪನು ಬಲು ದೂರ
ಇಂದಲ್ಲ ನಾಳೆ ಬರುತಾನೆ ಎನ್ನುವ ಆಸೆ ಬಲು ಭಾರ
ನನ್ನ ಆಸೆಗಳ ಪೂರೈಸೋ ಅಪ್ಪನು ಇದ್ದರೆ ಸಾಕಿನ್ನು
ಮುದ್ದು ಮಾಡಿ ನನ್ನ ಪ್ರೀತಿ ಮಾಡೊ ಅಪ್ಪ ಬೇಕು ನನಗಿನ್ನೂ
ನೆರಳಿನ ಹಾಗೆ ಜೊತೆ ಇರಬೇಕು
ಲಾಲನೆ ಪಾಲನೆಗೆ ಬೇರೆ ಜೀವವು ಇನ್ನೇತಕೇ
ಸುಂದರ ಸುಳ್ಳುಗಳು ಸಾಕು ಎಲ್ಲಿದೆ ಜೀವಂತಿಕೆ



Writer(s): Nagendra Prasad, 4 Musics



Attention! N'hésitez pas à laisser des commentaires.