Udit Narayan feat. Shamitha - Nannali Naanilla paroles de chanson

paroles de chanson Nannali Naanilla - Shamitha , Udit Narayan




ಗಾಯಕ; ಉದಿತ್ ನಾರಾಯಣ್
ಸಂಗೀತ: ಗುರುಕಿರಣ್
ಸಾಹಿತ್ಯ: ವಿ. ನಾಗೇಂದ್ರಪ್ರಸಾದ್
ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ
ನನ್ನಯ ತನವೆಲ್ಲ ಕೆಲೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ
ನೀನೇನೆ ನಾನಾದೆ
ನಾನೇಕೆ ಹೀಗಾದೆ
ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ
ಒಹ್ ದೇವ ಇಂದು ಅವಳಿಲ್ಲಿ ಬಂದು
ತಾನಾಗಿ ಎಲ್ಲ ಹೇಳಲಿ
ಇಂದಾದರೂನು ನಾ ಹೇಳಲೇನು
ಧೈರ್ಯವಿಲ್ಲ ನನ್ನಲಿ
ಒಹ್ ಮಾತಿಂದ ಮೌನ ಮರೆಯಾಗಲಿ
ನನ್ನಯ ತನವೆಲ್ಲ ಕಳೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ
ಒಂದು ಮಾತು ತುಟಿಮೇಲೆ ನಿಂತು
ಧನಿ ಆಗಲೆಂದೆ ಕಾದಿದೆ
ನಾ ಹೇಳಬೇಕೆ ನೀ ಹೇಳಬೇಕೆ
ಪ್ರೀತಿ ಎಲ್ಲ ಹೇಳದೆ
ಯಾರಾದರೇನು ಅನ್ನಬಾರದೆ
ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ
ನನ್ನಯ ತನವೆಲ್ಲ ಕೆಲೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ
ನೀನೇನೆ ನಾನಾದೆ
ಹೆ: ನಾನೇಕೆ ಹೀಗಾದೆ



Writer(s): V.NAGENDRA PRASAD, V NAGENDRA PRASAD




Attention! N'hésitez pas à laisser des commentaires.