Chitra feat. Srinivas - Ee Preeti Manasugalu текст песни

Текст песни Ee Preeti Manasugalu - Srinivas , K. S. Chithra




ಪ್ರೀತಿ ಮನಸುಗಳ ಮನಸೊಳಗೆ
ಮನಸಿಲ್ಲಿ ಮರಗುತಿದೆ ಮರೆಯೊಳಗೆ
ಪ್ರೀತಿಸಿ ಮನಸೋತ ಮನಸುಗಳೆ
ಸೋತಾಗ ಉಳಿಯೋದು ನೆನಪುಗಳೇ
ಮನಸು ಹುಟ್ಟಿದ ಮನಸಿಗಾಗಿಯೇ ಮನಸು ಕೊಟ್ಟೆ ನೀನೂ
ಮನಸ ತಳಮಳ ಮನಸ ತೊರೆದರೆ ಯಾವ ಮನಸಿಗೇನು
ಪ್ರೀತಿ ಮನಸುಗಳ ಮನಸೊಳಗೆ
ಮನಸಿಲ್ಲಿ ಮರುಗುತಿದೆ ಮರೆಯೊಳಗೆ
ಮನಸುಗಳ ಸೆಡೆಸಾಟವೆ ಪ್ರೀತಿಸುವ ಹುಡುಗಾಟವು
ಪ್ರೇಮಿಗಳ ಹುಡುಗಾಟವೆ ಜೀವನದ ಹುಡುಕಾಟವು
ಪ್ರೀತಿಸಿದ ಮರುಕ್ಷಣವೇ ಸಾವಿರ ಪ್ರಶ್ನೆಗಳಂತೆ
ಉತ್ತರಿಸೋ ಸಮಯದಲಿ ತ್ಯಾಗದ ಬಳುವಳಿಯಂತೆ
ಪ್ರೀತಿ ಕರುಳ ನೆರಳಿನೊಳಗೆ ನಲುಗಿಹೊಯ್ತು ಪ್ರೀತಿ
ಪ್ರೀತಿ ಮನಸುಗಳ ಮನಸೊಳಗೆ
ಮನಸಿಲ್ಲಿ ಮರುಗುತಿದೆ ಮರೆಯೊಳಗೇ
ಲೋಕದಲಿ ಪ್ರೀತಿಗೆ ಕಾರಣವೆ ಗೊತ್ತಿಲ್ಲವೋ
ವಿರಹಗಳ ಕಥೆಯಿಲ್ಲದೆ ಚರಿತೆಗಳೆ ಹುಟ್ಟಿಲ್ಲವೋ
ಅದುವರೆಗೂ ಕೂಡಿಟ್ಟ ಕನಸನು ಮುರಿದರೆ ಹೇಗೆ
ಇದುವರೆಗು ಮಾತಾಡಿ ಮುಖವನೆ ಮರೆತರೆ ಹೇಗೆ
ಬಂಧುಗಳ ಬಲೆಯ ಒಳಗೆ ಬಂಧಿಯಾಯ್ತು ಪ್ರೀತಿ
ಪ್ರೀತಿ ಮನಸುಗಳ ಮನಸೊಳಗೆ
ಮನಸಿಲ್ಲಿ ಮರುಗುತಿದೆ ಮರೆಯೊಳಗೆ
ಪ್ರೀತಿಸಿ ಮನಸೋತ ಮನಸುಗಳೇ
ಸೋತಾಗ ಉಳಿಯೋದು ನೆನಪುಗಳೇ
ಮನಸು ಹುಟ್ಟಿದ ಮನಸಿಗಾಗಿಯೆ ಮನಸು ಕೊಟ್ಟೆ ನೀನೂ
ಮನಸ ತಳಮಳ ಮನಸ ತೊರೆದರೆ ಯಾವ ಮನಸಿಗೇನೂ



Авторы: s. a. rajkumar



Внимание! Не стесняйтесь оставлять отзывы.