Текст песни




ಪೋಗಾದಿರೆಲೋ ರಂಗಾ
ಪೋಗಾದಿರೆಲೋ ರಂಗ ಬಾಗಿಲಿಂದಾಚೆ
ಪೋಗಾದಿರೆಲೋ ರಂಗ
ಭಾಗವತರು ಕಂಡು
ಭಾಗವತರು ಕಂಡು ಎತ್ತಿಕೊಂಡೊಯ್ವರು
ಪೋಗಾದಿರೆಲೋ ರಂಗಾ
ಸುರಮುನಿಗಳು ತಮ್ಮ ಹೃದಯ ಕಮಲದಲ್ಲಿ
ಸುರಮುನಿಗಳು ತಮ್ಮ ಹೃದಯ ಕಮಲದಲ್ಲಿ
ಪರಮಾತ್ಮನ ಕಾಣದೆ ಅರಸುವರು
ದೊರಕದ ವಸ್ತುವು ದೊರಕಿತು ತಮಗೆಂದು
ದೊರಕದ ವಸ್ತುವು ದೊರಕಿತು ತಮಗೆಂದು
ಹರುಷದಿಂದಲಿ ನಿನ್ನ ಕರದೆತ್ತಿಕೊಂಬುವರು
ಪೋಗಾದಿರೆಲೋ ರಂಗಾ
ಅಗಣಿತಗುಣ ನಿನ್ನ ಜಗದ ನಾರಿಯರೆಲ್ಲ
ಅಗಣಿತಗುಣ ನಿನ್ನ ಜಗದ ನಾರಿಯರೆಲ್ಲ
ಹಗೆಯಾಗಿ ನುಡಿದರು ಗೋಪಾಲನೆ
ಮಗುಗಳ ಮಾಣಿಕ್ಯ ತಗಲೀತು ಕರಕೆಂದು
ಬೇಗಾದಿಂದಲಿ ಬಂದು ಬಿಗಿದಪ್ಪಿಕೊಂಬುವರು
ಪೋಗಾದಿರೆಲೋ ರಂಗಾ
ಇತ್ತ ನಾರಿಯರೆಲ್ಲ ಇಷ್ಟವಾ ಸಲ್ಲಿಸೆಂದು
ಇತ್ತ ನಾರಿಯರೆಲ್ಲ ಇಷ್ಟವಾ ಸಲ್ಲಿಸೆಂದು
ಅಟ್ಟಟ್ಟಿ ಬೆನ್ನಟ್ಟಿ ತಿರುಗುವರೋ
ಅಟ್ಟಟ್ಟಿ ಬೆನ್ನಟ್ಟಿ ತಿರುಗುವರೋ
ಸೃಷ್ಟೀಶ ಪುರಂದರ ವಿಠ್ಠಲರಾಯನೆ
ಸೃಷ್ಟೀಶ ಪುರಂದರ ವಿಠ್ಠಲರಾಯನೆ
ಇಷ್ಟಿಷ್ಟು ಬೆಣ್ಣೆಯ ಕೊಟ್ಟೆನು ರಂಗಯ್ಯ
ಪೋಗಾದಿರೆಲೋ ರಂಗ ಬಾಗಿಲಿಂದಾಚೆ
ಪೋಗಾದಿರೆಲೋ ರಂಗಾ




G. K. Venkatesh - S Janaki Kannada Hit Songs
Альбом S Janaki Kannada Hit Songs
дата релиза
23-04-2025




Внимание! Не стесняйтесь оставлять отзывы.
Загрузка
Загрузка