Текст песни Yello Jhinugiruva - From "Just Maath Maathali" - Shreya Ghoshal
ಎಲ್ಲೋ ಜಿನುಗಿರುವ ನೀರು ಎಲ್ಲೋ ಝರಿಯಾಗಿ ಹರಿದು
ಎಲ್ಲೋ ಸಾಗರವ ಸೇರೊ ಪ್ರೀತಿ ಏನಿದು
ಎಲ್ಲೋ ರವಿ ಬರುವ ಸಮಯ ಎಲ್ಲೋ ಹೂ ಅರಳೋ ಸಮಯ
ಎಲ್ಲೋ ಚಿಲಿಪಿಲಿಯ ಭಾವವೂ
ಮುಂಜಾನೆ ಮಂಜು ಹನಿ ಭೂಮೀಲಿ ತಂಪಾಗಿ ತೀಡಿರುವ ಪ್ರೇಮ
ಇಂಪಾದ ಕೇಳ ತುಸು ಹಾಯಾಗಿ ಭುವಿ ಮುತ್ತಿಟ್ಟ ಕಿವಿಗುಟ್ಟು ಪ್ರೇಮ
ಬೆಳ್ಳಿಬೆಳಕನ್ನು ಹೀರಿ ಸೊಂಪಾಗಿ ಹೂಬಿರಿದು ನಕ್ಕಂತ ನಗುವಲ್ಲಿ ಪ್ರೇಮ
ಹಚ್ಚ ಹಸಿರನ್ನು ತೂರಿ ಕಂಪಾಗಿ ಹೂನಗಲು ಪರಿಮಳವೇ ಹೊನಲಾಗಿ ಪ್ರೇಮ
ದಿನ ಬೆಳಗಿನ ಈ ಸವಿಗನಸುಗಳು ಜೀಕಾಡೊ ಒಲವಿದು ಪ್ರೇಮ
ಹೊಸ ಲೋಕದ ಈ ಸವಿಭಾವಗಳು ನಲಿನಲಿಯುತ್ತ ಜಿಗಿದಿದೆ ಪ್ರೇಮ
ಎಲ್ಲೋ ಜಿನುಗಿರುವ ನೀರು ಎಲ್ಲೋ ಝರಿಯಾಗಿ ಹರಿದು
ಎಲ್ಲೋ ಸಾಗರವ ಸೇರೊ ಪ್ರೀತಿ ಏನಿದು
ಎಲ್ಲೋ ರವಿ ಬರುವ ಸಮಯ ಎಲ್ಲೋ ಹೂ ಅರಳೋ ಸಮಯ
ಎಲ್ಲೋ ಚಿಲಿಪಿಲಿಯ ಭಾವವೂ
ಮೋಹನ ಯಾರಿವ ನನ್ನೀಮನಸೆಳೆದವ ನನ್ನನ್ನೇ ನಂಬಲಾಗದ ಸಂಗೀತದ ಅಲೆಯಲ್ಲಿ ತೇಲಿಹೋದೆನಾ
ಕಾದಿದೆ ನವಿಲು ಕಾರ್ಮೋಡ ಬರಲು ಅರಳಲು ತನ್ನ ಗರಿಯೂ ಕಾಣಲು ಒಲವಿನ ರಂಗು ಬಾನಲೂ
ಎಲ್ಲೆಲ್ಲೂ ಜಾಜಿ ಮೊಲ್ಲೆ ಹೂವ ಸಾಲೆ ಅಲ್ಲಲ್ಲಿ ಒಲವಿನ ಮಾಲೆ
ಕಂಪಲ್ಲಿ ಕಾವ್ಯದಲ್ಲಿ ಮೌನದಲ್ಲಿ ಮಾತಲ್ಲಿ ಅರಿಯೆನಾ ಪ್ರೇಮದಲೆಲೇ
ಎಲ್ಲೋ ಜಿನುಗಿರುವ ನೀರು ಎಲ್ಲೋ ಝರಿಯಾಗಿ ಹರಿದು
ಎಲ್ಲೋ ಸಾಗರವ ಸೇರೊ ಪ್ರೀತಿ ಏನಿದು
ಎಲ್ಲೋ ರವಿ ಬರುವ ಸಮಯ ಎಲ್ಲೋ ಹೂ ಅರಳೋ ಸಮಯ
ಎಲ್ಲೋ ಚಿಲಿಪಿಲಿಯ ಭಾವವೂ
ಮುಂಜಾನೆ ಮಂಜು ಹನಿ ಭೂಮೀಲಿ ತಂಪಾಗಿ ತೀಡಿರುವ ಪ್ರೇಮ
ಇಂಪಾದ ಕೇಳ ತುಸು ಹಾಯಾಗಿ ಭುವಿ ಮುತ್ತಿಟ್ಟ ಕಿವಿಗುಟ್ಟು ಪ್ರೇಮ

Внимание! Не стесняйтесь оставлять отзывы.