Vasu Dixit - Kanavarike Chadapadike текст песни

Текст песни Kanavarike Chadapadike - Vasu Dixit




ಕನವರಿಕೆ ಚಡಪಡಿಕೆ ನಿನ್ನ ಬಳುವಳಿ
ಒಳಗೊಳಗೇ ನಡಿಯುತ್ತಿದೆ ಏನೋ ಚಳುವಳಿ
ಕನವರಿಕೆ ಚಡಪಡಿಕೆ ನಿನ್ನ ಬಳುವಳಿ
ಒಳಗೊಳಗೇ ನಡಿಯುತ್ತಿದೆ ಏನೋ ಚಳುವಳಿ
ನಿನ್ನ ಕಂಡಾಗಿನಿಂದ ನಾ ಮರಗುಳಿ (ಮರಗುಳಿ)
ಎಷ್ಟು ಬಾರಿ ನೆನೆದರೂ ಮನವು ಯಾಕೋ ಗಲಿಬಿಲಿ
(ಗಲಿಬಿಲಿ, ಗಲಿಬಿಲಿ, ಗಲಿಬಿಲಿ, ಗಲಿಬಿಲಿ, ಗಲಿಬಿಲಿ, ಗಲಿಬಿಲಿ, ಗಲಿಬಿಲಿ)
ಕದ್ದು ಮುಚ್ಚಿ ನೋಡುವಾಸೆ ನಿನ್ನ ಹಿಂದೆ ಸಾಗುವಾಸೆ
(ಕದ್ದು ಮುಚ್ಚಿ ನೋಡುವಾಸೆ ನಿನ್ನ ಹಿಂದೆ ಸಾಗುವಾಸೆ)
ನೀ ಎಷ್ಟೇ ಬೈದರು
ನೀ ಎಷ್ಟೇ ಬೈದರು
ಕಣ್ಣ ರೆಪ್ಪೆ ಮುಚ್ಚಲು ನಿನ್ನದೇ ಬಿಂಬವು
ಸಮಯ ಕೊಡು ತುಸು ವಿಶ್ರಾಂತಿ ಬೇಡವೇ
ಮಾತುಗಾರನ ಮೌನ ಮುಸಿಕಿದೆ
ಜಾದೂಗಾರನ ಶಿಕಾರಿಯಾಗಿದೆ
ಹಿತವಾದ ತಂಗಾಳಿ ಬಿಸಿಯಾಗಿ ಮೈದೋರಿ
ಕನಸುಗಳ ವ್ಯವಹಾರ ನಡೆದಿದೆ ಅದ್ದೂರಿ
ಕನವರಿಕೆ ಚಡಪಡಿಕೆ ನಿನ್ನ ಬಳುವಳಿ
ಒಳಗೊಳಗೇ ನಡಿಯುತ್ತಿದೆ ಏನೋ ಚಳುವಳಿ
ವಶೀಕರಣ ಮಾಡಿ ನಿನ್ನ ಕಣ್ಣ ಭಾಷೆಯು
ಅತಿಯಾಗಿ ಕಾಡಿದೆ ನಿನ್ನ ಕೂಡುವಾಸೆಯೂ
ಖಾತರಿ ಮಾಡು ಒಮ್ಮೆ ನಗುವಿನ ಸಹಿ ಹಾಕಿ
ಉಳಿದಿರಬಹುದೇನೋ ಪ್ರೀತಿಯ ಹಳೇ ಬಾಕಿ
ಕನವರಿಕೆ ಚಡಪಡಿಕೆ ನಿನ್ನ ಬಳುವಳಿ
ಒಳಗೊಳಗೇ ನಡಿಯುತ್ತಿದೆ ಏನೋ ಚಳುವಳಿ



Авторы: Raghavendra Br, Vasu Dixit



Внимание! Не стесняйтесь оставлять отзывы.