Hariharan feat. Anuradha Sriram - Balangochi Ilade (From "Kodanda Rama") Songtexte

Songtexte Balangochi Ilade (From "Kodanda Rama") - Hariharan feat. Anuradha Sriram




ಚಿತ್ರ: ಕೋದಂಡರಾಮ
ಸಂಗೀತ: ವಿ.ರವಿಚಂದ್ರನ್
ಗಾಯಕರು: ಹರಿಹರನ್,ಅನುರಾಧ ಶ್ರೀರಾಮ್
ಬಾಲಂಗೋಚಿ ಇಲ್ಲದೆ ಹಾರದು ಗಾಳಿಪಟ...
ನನ್ನ ಹೃದಯ ನಿನ್ನ ನೋಡದೆ ಸದ್ದು ಮಾಡದು
ಗೋತಾಹೊಡೆಯೋ ಮುಂಚೆ ನೀನು
ನನ್ನ ಹೃದಯ ಸೇರು ಬಾರೋ
ಸೋತ ಹೃದಯದ ಮುಂದೆ ಜೋರು ಬೇಡ ಬೇಗ ಬಾರೋ
ಆಕಾಶದಲಿ ಗೂಡು ಕಟ್ಟಲು ಆಗದು ಕೇಳಮ್ಮಾ
ಹಾರುವ ಗಾಳಿಪಟ ಕೆಳಗಿಳಿಲೇ ಬೇಕಮ್ಮಾ
ಸೂತ್ರ ಇಲ್ಲದ ಗಾಳಿಪಟ ಹಾರಲ್ಲ ಕೇಳಮ್ಮಾ
ಬಾಲಂಗೋಚಿ ಇಲ್ಲದೆ ಹಾರದು ಗಾಳಿಪಟ...
ನನ್ನ ಹೃದಯ ನಿನ್ನ ನೋಡದೆ ಸದ್ದು ಮಾಡದೂ... ಉ...
ಏನು ಅರಿಯದ ವಯಸಿನಲಿ ಮನಸು ಸೋತೆ ನಾನು
ಕಣ್ಣಲೇ ಪ್ರೇಮಾ ಪತ್ರ ಬರೆದೇ ನಾನು
ಮಾ ರಿಗ ಮಮ ಗಗರಿಗ ಮಾ ರಿಗ ಮಮ ಗಗರಿಗ
ಮಾ ರಿಗ ಮಮ ಗಗರಿಗ ಮಾರಿ ಮಾಗ ರಿಸಸ
ಏನು ಅರಿಯದ ಎಬ್ಬೆಟ್ಟು ನಾ ತಿಳಿದುಕೊಳ್ಳಮ್ಮ ನೀ
ಪ್ರೀತಿಲೀ L board-u ನಾನು ಕೇಳಮ್ಮಾ ನೀ
ಪ್ರೇಮ ಪತ್ರ ಓದೋಕೆ ಮನಸೂ ಬೇಕಪ್ಪಾ
ಮನಸಲ್ಲಿ ಒಂದಿಷ್ಟು ಜಾಗ ಕೊಟ್ಟರೆ ಸಾಕಪ್ಪಾ
ನೀನು ಇರದ ಬಾಳು ನರಕ ಕೇಳೋ ಸರದಾರ
ಬಾಲಂಗೋಚಿ ಇಲ್ಲದೆ ಹಾರದು ಗಾಳಿಪಟ...
ನನ್ನ ಹೃದಯ ನಿನ್ನ ನೋಡದೆ ಸದ್ದು ಮಾಡದೂ... ಊ...
ಏನು ಅರಿಯದ ವಯಸಿನಲಿ ಪ್ರೀತಿ ಮಾಡಬಾರದು
ಪ್ರೀತಿಸಿ ಆಸೆಯ ಗೂಡು ಕಟ್ಟಬಾರದು
ಮಾ ರಿಗ ಮಮ ಗಗರಿಗ ಮಾ ರಿಗ ಮಮ ಗಗರಿಗ
ಮಾ ರಿಗ ಮಮ ಗಗರಿಗ ಮಾರಿ ಮಾಗ ರಿಸಸ
ದೂರದಿಂದಲೇ ಚಂದಿರ ನೋಡಲು ಚೆಂದಾನಮ್ಮಾ
ಹತ್ತಿರ ಹೋದರೆ ಮರಳುಗಾಡಾಮ್ಮಾ
ಚಂದಮಾಮನ ಸೇರೊ ಆಸೆ ನನಗೆ ಇಲ್ಲಪ್ಪಾ
ನನ್ನ ಮಾಮನೆ ನನ್ನ ಹತ್ತಿರ ಬಂದರೆ ಸಾಕಪ್ಪಾ
ಪ್ರೀತಿಮಾಡೋ ವಯಸಲ್ಲಿ ಕೋಪ ಯಾಕೋ ಸರದಾರ.ಆ
ಬಾಲಂಗೋಚಿ ಇಲ್ಲದೆ ಹಾರದು ಗಾಳಿಪಟ...
ನನ್ನ ಹೃದಯ ನಿನ್ನ ನೋಡದೆ ಸದ್ದು ಮಾಡದು
ಗೋತಾಹೊಡೆಯೋ ಮುಂಚೆ ನೀನು
ನನ್ನ ಹೃದಯ ಸೇರು ಬಾರೇ
ಸೋತ ಹೃದಯದ ಮುಂದೆ ಜೋರು ಬೇಡ ಬೇಗ ಬಾರೇ



Autor(en): v. ravichandran


Attention! Feel free to leave feedback.
//}