Shreya Ghoshal - Marula Neenu - From "Raju Kannada Medium" Songtexte

Songtexte Marula Neenu - From "Raju Kannada Medium" - Shreya Ghoshal




ಮರುಳ ನೀನು ಹೂವ ತರಲು ಎಲ್ಲಿ ಹೋಗಿರುವೆ
ಅರಳಿ ನಾನು ಹೂವಿನಂತೆ ಇಲ್ಲೇ ಕಾದಿರುವೆ
ಬಾನೆ ಬಂದಿದೆ ನೋಡು ನಮ್ಮ ಬಾಗಿಲಿಗೆ
ಬೇರೆ ಬೇಡೆನು ಏನು ನೀನೇ ಬೇಕೆನೆಗೆ
ಮರುಳ ನೀನು ಹೂವ ತರಲು ಎಲ್ಲಿ ಹೋಗಿರುವೆ
ಅರಳಿ ನಾನು ಹೂವಿನಂತೆ ಇಲ್ಲೇ ಕಾದಿರುವೆ
ನಿಲುವುಗನ್ನಡಿ ನನ್ನ ಕೇಳಿದೆ ನಿನ್ನ ಮಾಹಿತಿಯಾ
ಹೇಳು ಬೇಗನೆ ನಿನ್ನ ಕನಸಿಗೆ ನಾನೇ ಸಾರಥಿಯಾ
ಓ, ಕವಿತೆಯನ್ನು ಅರಸಿಕೊಂಡು ಎಲ್ಲಿ ಅಲೆದಿರುವೆ
ಪದಗಳನ್ನು ಹಿಡಿದು ನಾನು ಇಲ್ಲೇ ಕೂತಿರುವೆ
ಮುಗಿದುಕೊಟ್ಟೆನು ಎಲ್ಲ ಭಾವನೆ ನಿನ್ನ ವೈಖರಿಗೆ
ಮೂಕವಾಗಿದೆ ಜೀವ ನಿನ್ನಯ ಗೈರು ಹಾಜರಿಗೆ
ಒಲವಿನೊಲೆಯ ಉರಿಸಲೆಂದು ಎಲ್ಲಿ ಕಳೆದಿರುವೆ
ಕಿಡಿಯನೊಂದ ಇರಿಸಿ ನಾನು ಇಲ್ಲೇ ಉಳಿದಿರುವೆ
ಬಾನೆ ಬಂದಿದೆ ನೋಡು ನಮ್ಮ ಬಾಗಿಲಿಗೆ
ಬೇರೆ ಬೇಡೆನು ಏನು ನೀನೇ ಬೇಕೆನೆಗೆ




Attention! Feel free to leave feedback.