Sonu Nigam - Usire Usire - From "Huchcha" Songtexte

Songtexte Usire Usire - From "Huchcha" - Sonu Nigam




ಉಸಿರೇ, ಉಸಿರೇ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲೀ ಹೃದಯ ಗಿಲ್ಲಬೇಡ
ಕಣ್ಣೀರಲೇ ಬೇಯುತಿದೆ ಮನಸು
ನೋವಲ್ಲಿಯೂ ಕಾಯುತಿದೆ ಕನಸು
ಉಸಿರಲೇ ಪ್ರೀತಿಸು
ಉಸಿರನೇ ಪ್ರೀತಿಸು
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು
ಉಸಿರೇ ಉಸಿರೇ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲೀ ಹೃದಯ ಗಿಲ್ಲಬೇಡ
ಬಾನಿಗೆ ಬಣ್ಣ ಹಚ್ಚೋ ಕಣ್ಣಿನವಳು
ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದಳು
ನಿನ್ ಪ್ರೀತಿಗಿಲ್ಲಿ ಯಾವ ಬಣ್ಣ ಹೇಳು
ನೀ ಬಣ್ಣ ಹಚ್ಚೋ ಮುಂಚೆ ಸ್ವಲ್ಪ ಹೇಳು
ಓ, ಭೂಮಿಗೆ ಬೇಲಿ ಕಟ್ಟೋ ನಗೆಯವಳು
ಬಾಯಿಗೆ ಬೀಗ ಹಾಕಿ ಪ್ರೀತಿಸಿದಳು
ಪ್ರೀತಿಸಿದ ಮರು ಕ್ಷಣವೇ ಅವಳೇ ನನ್ನುಸಿರು
ಉಸಿರಲೇ ಜೀವಿಸು
ಉಸಿರನೇ ಸೇವಿಸು
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು
ಉಸಿರೇ ಉಸಿರೇ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲಿ ಹೃದಯ ಗಿಲ್ಲಬೇಡ
ಹಾರುವ ಹಕ್ಕಿಗಳ ಜೊತೆಯವಳು
ರೆಕ್ಕೆಯ ಮೇಲೆ ತಂದು ಕೂರಿಸಿದಳು
ನಿನ್ ಪ್ರೀತಿ ಹಾರೋ ದೂರ ಎಷ್ಟು ಹೇಳು
ನೀ ಹಾರೋವಾಗ ಕಾಣಿಸ್ತೀವ ಹೇಳು
ಓ, ಮೀನಿನ ಹೆಜ್ಜೆ ಮೇಲೆ ನಡೆವವಳು
ಬಂದರು ಬಾರದಿದ್ರು ಹೇಳದವಳು
ಪ್ರೀತಿಸುವ ಕ್ಷಣ ಮಾತ್ರ
ಪ್ರೀತಿ ಬಲು ಸುಲಭ
ಉಸಿರಲೇ ಅರಳಿಸು
ನನ್ನುಸಿರನೇ ಮರಳಿಸು
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು
ಉಸಿರೇ ಉಸಿರೇ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲಿ ಹೃದಯ ಗಿಲ್ಲಬೇಡ
ಕಣ್ಣೇರಲೇ ಬೇಯುತಿದೆ ಮನಸು
ನೋವಲ್ಲಿಯೂ ಕಾಯುತಿದೆ ಕನಸು
ಉಸಿರಲೇ ಪ್ರೀತಿಸು
ಉಸಿರನೇ ಪ್ರೀತಿಸು
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು




Attention! Feel free to leave feedback.
//}