V.Hari Krishna feat. Sonu Nigam - Nee Jothe Iru Songtexte

Songtexte Nee Jothe Iru - Sonu Nigam , V. Hari Krishna




ನೀ ಜೊತೆ ಇರು ದಿನ ದಿನ ದಿನ, ನನ್ನ ಜೊತೆ ಇರು ದಿನ ದಿನ
ಚಂದೊಳ್ಳಿ ಚಲುವೆ ನೀನು, ಒಂದೊಳ್ಳೆ ಕನಸು ನೀನು
ನಿನ್ನಲ್ಲೇ ಕಳೆದು ಹೋದೆ, ಏನಂತ ಹುಡುಕಲಿ ನಾನು?
ಒಲವೆಂಬ ಕವನ ನೀನು, ಓದೋಕೆ ಬಂದವ ನಾನು
ಕಣ್ಣಲ್ಲಿ ಕಣ್ಣು ಇಟ್ಟು ಕಾಯುವೆನು ನಿನ್ನ ನಾನು
ನೀ ಜೊತೆ ಇರು ದಿನ ದಿನ ದಿನ, ನನ್ನ ಜೊತೆ ಇರು ದಿನ ದಿನ
ನನ್ನ ಜೊತೆ ಇರು ದಿನ ದಿನ
ಏನು ಮಾಡಲಿ? ನಿನ್ನ ನೋಡುತ ಏನೋ ಆಗಿದೆ
ಹೇಗೆ ಹೇಳಲಿ? ಎಲ್ಲಾ ಮಾತಲು ಪ್ರೀತಿಯಾಗಿದೆ
ನಿನ್ನ ನೋಡುವ ಕಣ್ಣು, ಎಂದೂ ಮುಚ್ಚದೆ ಇರಲಿ
ಅಪ್ಪಿ ತಪ್ಪಿಯು ಅದರ, ದಾರಿ ತಪ್ಪದೆ ಇರಲಿ
ನನಗೆ ಸಿಗುವ ಉಸಿರೊಳಗೆ, ಅತಿಯಾಗು ನೀನೇ
ಬದುಕು ಕಲಿಯೊ ದಿನಗಳಿಗೆ, ಜೊತೆಯಾಗು ನೀನೇ
ನೀ ಜೊತೆ ಇರು ದಿನ ದಿನ ದಿನ, ನನ್ನ ಜೊತೆ ಇರು ದಿನ ದಿನ
ನನ್ನ ಜೊತೆ ಇರು ದಿನ ದಿನ
ಏನೋ ಪುಣ್ಯವೋ, ನಿನ್ನ ನೋಡುವ ಭಾಗ್ಯ ಸಿಕ್ಕಿದೆ
ಹೆಜ್ಜೆ ಹೆಜ್ಜೆಗೂ, ಪ್ರೀತಿ ಮಾಡುವ ಧೈರ್ಯ ಬಂದಿದೆ
ನೋಡಿ ಒಪ್ಪಿದ ಹೃದಯ, ಎಂದೂ ಹತ್ತಿರ ಇರಲಿ
ಅಳತೆ ಸಿಗದೆ ಇರುವ, ಪ್ರೀತಿ ಹಾಗೆಯೇ ಇರಲಿ
ನಿನಗೂ ನನಗೂ ಉಡುಗೊರೆಯು, ಪ್ರೀತಿ ತಾನೆ
ಎಲ್ಲಾ ಇರುವ ಧರೆಯೊಳಗೂ, ನನಗೆಲ್ಲ ನೀನೇ
ನೀ ಜೊತೆ ಇರು ದಿನ ದಿನ ದಿನ, ನನ್ನ ಜೊತೆ ಇರು ದಿನ ದಿನ
ನನ್ನ ಜೊತೆ ಇರು ದಿನ ದಿನ






Attention! Feel free to leave feedback.