Vijay Prakash - Vidhi Baraha (From "Sojiga") Songtexte

Songtexte Vidhi Baraha (From "Sojiga") - Vijay Prakash




ಚಿತ್ರ: ಸೋಜಿಗ
ಗಾಯಕ: ವಿಜಯ ಪ್ರಕಾಶ್
ವಿಧಿ ಭರಹ ಯಾಕಾಗಿ ಹೀಗಾಯ್ತು
ಬೇಕಿಹುದೇ ಮರು ಪ್ರಸ್ತಾವನೆ...
ವಿರಹ ಬಿಸಿಲಾಗಿ ಬಂದಾಯ್ತು
ಕೆಡಿಸಿಹುದೇ ಒಲವಾ ತಂಪನೇ...
ಚಿವುಟಿದೆ ಚಂದ್ರನ ಚದುರಿದ ಮೇಘವು
ಹೊರಟಿದೆ ವೇಗದಿ ಬಿಡದೇನೆ ಸುಳಿವು...
ವಿಧಿ ಭರಹ ಯಾಕಾಗಿ ಹೀಗಾಯ್ತು
ಬೇಕಿಹುದೇ ಮರು ಪ್ರಸ್ತಾವನೆ...
ನೀ ನಡೆದಿರೋ ಕಾಲು ದಾರಿಯೂ
ಕಂಗಾಲಾಗಿದೆ ನೀ ಕಣ್ಮರೆಯಾಗಲು...
ನೀನಡಗಿರೋ ನನ್ನ ನೆನಪುಗಳೆಲ್ಲವೂ
ಅಂಗಾಲಾಚಿವೆ ನೀ ನನ್ನವಳಾಗಲು...
ಬಿರುಸಿನ ಗಾಳಿಗೆ ಭುಗಿಲೆದ್ದ ಧೂಳು
ಭುವಿಯಲಿ ತಂದಿದೆ ಹಗಲಲ್ಲೆ ಇರುಳು...
ವಿಧಿ ಭರಹ ಯಾಕಾಗಿ ಹೀಗಾಯ್ತು...
ನೀ ಜೊತೆಗಿರೊ ಚಂದದ ದಿನಗಳು
ಚಂದಾ ಕೇಳಿವೆ ಕಣ್ಣಂಚಲಿ ಈಗಲೂ...
ಹಚ್ಚೆ ಹಾಕಿರೋ ನಿನ್ನ ಹೆಸರನ್ನು
ಅಳಿಸಿ ಹಾಕಿದೆ ಕರಾಳ ಕನಸುಗಳು...
ತೆರೆದರೆ ಮಾತಿಗೆ ಮನನೊಂದ ಮುಗಿಲು
ತೀರದ ಮೌನಕೆ ಹೊಣೆ ಈಗ ಕಡಲು...
ವಿಧಿ ಭರಹ ಯಾಕಾಗಿ ಹೀಗಾಯ್ತು
ಬೇಕಿಹುದೇ ಮರು ಪ್ರಸ್ತಾವನೆ...



Autor(en): sunaad gowtham



Attention! Feel free to leave feedback.