K. S. Chithra feat. S. P. Balasubrahmanyam - Kannada Gangeli Lyrics

Lyrics Kannada Gangeli - S. P. Balasubrahmanyam , K. S. Chithra

ಚಿತ್ರ: ಶೃಂಗಾರ ಕಾವ್ಯ (೧೯೯೩/1993)
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಹಾಡಿದವರು: ಎಸ್.ಪಿ.ಬಿ.
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಗಂಧದ ಕಂಪಿನಲಿ, ಹಾಡುವೆ ನಾನೀಗ, ಹಾಡುವೆ ನಾನೀಗ
ಜೀವನ ಗಾಯನ ಪಾವನವೊ, ದೇವರ ವರದಿಂದ
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಒಲವಿನ ಶೃತಿಯಿರಲು, ಮನಬಯಸಿದ ಸತಿಯಿರಲು
ಸರಳತೆ ಸವಿಯಿರಲು, ನಿಜ ಗೆಳೆಯರು ಜೊತೆಯಿರಲು
ಸ್ವರ್ಗದ ಕನಸೇತಕೆ, ಮುಕ್ತಿಯ ಭ್ರಮೆಯೇತಕೆ, ಬದುಕಿಗೇ
ಹೊನ್ನಿನ ಹೊರೆಯೇತಕೆ, ಕೀರ್ತಿಯ ಸೆರೆಯೇತಕೆ, ಬದುಕಿಗೇ
ಸುಂದರ ಸಂಸಾರ ಸವಿ ಸಾಲದೆ
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಗಂಧದ ಕಂಪಿನಲಿ, ಹಾಡುವೆ ನಾನೀಗ, ಹಾಡುವೆ ನಾನೀಗ
ಜೀವನ ಗಾಯನ ಪಾವನವೊ, ದೇವರ ವರದಿಂದ
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಕಲೆಗಳ ತವರಿರಲು, ಕವಿ ಋಷಿಗಳ ಬಲವಿರಲು
ಕಲಿಕೆಯ ಕಡಲಿರಲು, ಗುರಿತಲುಪಿಸೊ ಹಡಗಿರಲು
ನಿತ್ಯವು ಹೊಸ ಸಾಧನೆ, ಸತ್ಯವೆ ಆಲೋಚನೆ, ಬದುಕಿಗೇ
ಸ್ನೇಹವೆ ಸಹಚಾರಿಯೋ, ಪ್ರೇಮವೇ ಸಹಪಾಠಿಯೋ,
ಬದುಕಿಗೇ
ಸುಂದರ ಸಂಸಾರ ಸವಿ ಸಾಲದೆ
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಗಂಧದ ಕಂಪಿನಲಿ, ಹಾಡುವೆ ನಾನೀಗ, ಹಾಡುವೆ ನಾನೀಗ
ಜೀವನ ಗಾಯನ ಪಾವನವೊ, ದೇವರ ವರದಿಂದ
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ

K. S. Chithra feat. S. P. Balasubrahmanyam - Shrungara Kaavya (Original Motion Picture Soundtrack)

Attention! Feel free to leave feedback.