Lyrics




ಧೀಂತ ಧೀಂತ
ಮನದ ಮಾತ
ಬಿಡದೇ ಕಾಡು
ನೆನಪೇ ಸ್ವಂತ
ಭೋರ್ಗರೆವ ಮಾಯಾನದಿ ಮನ
ಭಾವನೆಗಳ ಅಲೆಯಲಿ ದಿನ
ಇರುವೆ ನೀನು ಹೇಗೆ
ಮನಸೇ ಮನಸೇ ಅರೆ ಕೇಳೇ
ಕಳೆದ ನಗುವ ಬಳಿ ತಾರೆ
ಮನಸಾರೆ
ಧೀಂತ ಧೀಂತ ಮನದ ಮಾತ
ಅರಿವಾದಂತ ಕ್ಷಣವೇ ಸ್ವಂತ
ಕನಸುಗಳ ಸಂತೇಲಿ ಸಾಗಿ ನಾ
ಹುಡಿಕಿಡಲೇ ನಿನಗೊಂದು ಜೀವನ
ಬೊಗಸೆತುಂಬಿ ಪ್ರೀತಿ
ಮನಸೇ ಮನಸೇ ಅರೆ ಕೇಳೇ
ಕಳೆದ ನಗುವ ಬಳಿ ತಾರೆ
ಮನಸಾರೆ
ಮಿತಿ ಮೀರುತಿದೆ
ಮನದ ನಿನಾದ
ಅತಿಯಾದರೂ ಕೂಡ
ಏನೋ ಹಿತವಿದೆ
ಕಲೆಹಾಕಿದ ನೆನಪು
ನಡುದಾರಿಲಿ ತಡೆದು
ಜೊತೆಯಾಗಿ ಕೈ ಹಿಡಿದು
ಸಾಗೋಣ ಎಂದಿದೆ
ಮನದಾಳದಿ ಹುಡುಕಾಟ ನೂರು
ಅರಳೋ ಮರಳೋ ಮನಸೇನೆ
ಮರಳಿ ಅರಳು ಬೆಳಕಾಗಿ
ಬದುಕಾಗಿ
ಮನಸೇ ಮನಸೇ ಅರೆ ಕೇಳೇ
ಕಳೆದ ನಗುವ ಬಳಿ ತಾರೆ
ಮನಸಾರೆ



Writer(s): Kiran Kaverappa, Sachin Warrier



Attention! Feel free to leave feedback.
Loading
Loading