Hariharan - O Tuntiye (From "Kalavida") Lyrics

Lyrics O Tuntiye (From "Kalavida") - Hariharan




ಪ್ರೇಮ ಪ್ರೇಮ, ಪ್ರೇಮ ಪ್ರೇಮ
ಪ್ರೇಮ ಪ್ರೇಮ, ಪ್ರೇಮ ಪ್ರೇಮ
ತುಂಟಿಯೆ, ಗೋರಂಟಿಯೆ
ಎಲ್ಲಿರುವೆಯೆ, ಹೇಗಿರುವೆಯೆ
ಸಾಕಿನ್ನು ಬಾರೆ ಬಾ ಬಾರೆ ಹುಡುಗಾಟ
ನಿನಗಾಗಿ ನನ್ನ ಬಾಳೆಲ್ಲ ಹುಡುಕಾಟ
ನಂಜಿಯೆ, ಕಾರಂಜಿಯೆ
ಯಾವೂರಿಗೆ, ಹೋಗಿರುವೆಯೆ
ಸಾಕಿನ್ನು ಬಾರೆ ಬಾ ಬಾರೆ ತುಂಟಾಟ
ಬೇಡಮ್ಮ ಬೇಡ ಪ್ರೀತಿ ಜೂಟಾಟ
ಪ್ರೇಮ ಪ್ರೇಮ, ಪ್ರೇಮ ಪ್ರೇಮ
ಪ್ರೇಮ ಪ್ರೇಮ, ಪ್ರೇಮ ಪ್ರೇಮ
ಬಣ್ಣದ ನೀರಲ್ಲಿ
ಕುಂಚದ ಕೊನೆಯಲ್ಲಿ
ಹಾಳೆಯ ಎದೆಯಲ್ಲಿ
ನಿನ್ನನ್ನು ಬಿಡಿಸೋಕೆ ನೋಡಿದೆ
ಮೂಡದೆ ನೀ ಗೋಜು ಮಾಡಿದೆ
ಪ್ರೇಮ ಪ್ರೇಮ, ಪ್ರೇಮ ಪ್ರೇಮ
ಬಾರೇ ಪ್ರೇಮ, ತಾರೇ ಪ್ರೇಮ
ಕುಂಚವೆ, ಸಂಕೋಚವೆ
ಬಣ್ಣವೆ, ಬಿನ್ನಾಣವೆ
ಸಾಕಿನ್ನು ಬಾರೆ ಬಾ ಬಾರೆ ಚೆಲ್ಲಾಟ
ಕೇಳಿಸದೆ ನನ್ನ ಕೂಗಾಟ
ಮಾತಲಿ ನೀ ಮುಂದೆ
ಅಲ್ಲಿಗೆ ಬಾ ಎಂದೆ
ತಪ್ಪದೆ ನಾ ಬಂದೆ
ಅಲ್ಲಿಯೆ ನೀನಿರುವೆ ಎಂದರು
ಎಲ್ಲರು ನೀನಿಲ್ಲೆ ಅಂದರು
ಪ್ರೇಮ ಪ್ರೇಮ, ಪ್ರೇಮ ಪ್ರೇಮ
ಪ್ರೇಮ ಪ್ರೇಮ, ಪ್ರೇಮ ಪ್ರೇಮ
ಸಾಕಿನ್ನು ಬಾರೆ ಬಾ ಬಾರೆ ಹುಡುಗಾಟ
ನಿನಗಾಗಿ ನನ್ನ ಬಾಳೆಲ್ಲ ಹುಡುಕಾಟ
ತುಂಟಿಯೆ, ಮಳ್ಳಿಯೆ
ಕಳ್ಳಿಯೆ, ಸುಳ್ಳಿಯೆ
ಸಾಕಿನ್ನು ಬಾರೆ ಬಾ ಬಾರೆ ಹುಡುಗಾಟ
ನಿನಗಾಗಿ ನನ್ನ ಬಾಳೆಲ್ಲ ಹುಡುಕಾಟ



Writer(s): hamsalekha


Attention! Feel free to leave feedback.