S. Janaki - Honnina Therinali Lyrics

Lyrics Honnina Therinali - S. Janaki



ಹೊನ್ನಿನಾ ತೇರಿನಲಿ ಬಾಲ ಭಾಸ್ಕರ ಬಂದು
ಬೆಳ್ಳಿ ಬೆಟ್ಟದ ಮೇಲೆ ಬೆಳಕ ಚೆಲ್ಲಿರುವಾ
ಬೆಳಗಾಯಿತೇಳಯ್ಯ ಶಶಿ ಶೇಖರ
ಬೆಳಗಾಯಿತೇಳಯ್ಯ ಗಂಗಾಧರ
ನಂದಿ ಭೃಂಗಿಗಳೆಲ್ಲ ಬಾಗಿಲಲಿ ನಿಂದಿಹರು
ಋಷಿ ಮುನಿಗಳೆಲ್ಲರೂ ಕಾಣ ಬಂದಿಹರು
ಬೆಳಗಾಯಿತೇಳಯ್ಯ ಶಶಿ ಶೇಖರ
ಬೆಳಗಾಯಿತೇಳಯ್ಯ ಗಂಗಾಧರ
ಗಿರಿರಾಜನಾ ಕುವರಿ ಕಾಲ ಬಳಿ ನಿಂತಿಹಳು
ಪಾದಗಳ ಪೂಜಿಸಲು ಪುಷ್ಪಗಳ ತಂದಿಹಳು
ಬೆಳಗಾಯಿತೇಳಯ್ಯ ಶಶಿ ಶೇಖರ
ಬೆಳಗಾಯಿತೇಳಯ್ಯ ಗಂಗಾಧರ




Attention! Feel free to leave feedback.