S. P. Balasubrahmanyam - Yaava Huvvu Yaara Mudigo (From "Besuge") Lyrics

Lyrics Yaava Huvvu Yaara Mudigo (From "Besuge") - S. P. Balasubrahmanyam




ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದೇ
ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಮುಖದಿ ಒಂದು ಭಾವನೆ
ಕಣ್ಣಲೇನೊ ಕಾಮನೆ
ಮುಖದಿ ಒಂದು ಭಾವನೆ
ಕಣ್ಣಲೇನೊ ಕಾಮನೆ
ಒಂದು ಮನದ ಯೋಚನೆ
ಒಂದು ಮನಕೆ ಸೂಚನೆ
ಯಾರು ಅರಿಯಲಾರರು
ಯಾರ ಪಾಲು ಯಾರಿಗೋ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಒಂದು ಸುಮವು ಅರಳಿತು
ದುಂಬಿಯನ್ನು ಒಲಿಸಿತು
ಒಂದು ಸುಮವು ಅರಳಿತು
ದುಂಬಿಯನ್ನು ಒಲಿಸಿತು
ಮೋಹ ಪಾಶ ಎಸೆಯಿತು
ಒಂದು ಪಾಠ ಕಲಿಸಿತು
ಇಂಥ ಪಾಠ ಕಲಿಸಲು
ಗುರುವು ಯಾರು ಯಾರಿಗೋ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಎಂದೋ ಹುಟ್ಟಿದಾಸೆಯೂ
ಇಂದು ಮನವ ತಟ್ಟಿತು
ಎಂದೋ ಹುಟ್ಟಿದಾಸೆಯೂ
ಇಂದು ಮನವ ತಟ್ಟಿತು
ಮನದ ಕದವ ತೆರೆಯಲು
ಬೇರೆ ಗುರಿಯ ಮುಟ್ಟಿತು
ಯಾರು ಹೇಳಬಲ್ಲರು
ಯಾರ ಪಯಣ ಎಲ್ಲಿಗೋ ಎಲ್ಲಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದೇ
ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ



Writer(s): SHYAMSUNDER KULKARNI, VIJAYABHASKAR VIJAYABHASKAR


Attention! Feel free to leave feedback.