Lyrics Saaluthillave - From "Kotigobba 2" - Shreya Ghoshal , Vijay Prakash
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೆ
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೆ
ಒಂದೆ ಸಮನೆ ನಿನ್ನ ನೋಡುತಿದ್ದ ಮೇಲೂ
ತುಂಬ ಸಲಿಗೆಯಿಂದ ಬೆರೆತು ಹೋದ ಮೇಲೂ
ಪಕ್ಕದಲ್ಲಿ ಕುಳಿತುಕೊಂಡು ನಿನ್ನ ಮೈಗೆ ಅಂಟಿ ಕೊಂಡು ಉಸಿರು ಉಸಿರು ಬೆಸೆದ ಮೇಲೂ...
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೆ
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೆ
ಮುಂಜಾನೆ ನನ್ನ ಪಾಲಿಗಂತೂ ಸಾಲೊಲ್ಲ
ಮುಸ್ಸಂಜೆ ತನಕ ಸನಿಹವಂತೂ ಸಾಲೊಲ್ಲ
ನನ್ನಾಸೆ ಅನಿಸಿಕೆ ನಾ ಹೇಳಲೂ
ನಿಘಂಟು ಪದಗಳೇ ಸಾಲೋದಿಲ್ಲ
ನಿನ್ನೊಲವ ಚೆಲುವ ಅಳೆವೆ ಕಣ್ಣು ಸಾಲೋದಿಲ್ಲ
ನನ್ನೊಲವ ಬರೆವೆ ಗಗನ ಹಾಳೆ ಸಾಲೋದಿಲ್ಲ
ಋತುಗಳೆಲ್ಲಾ ತಿರುಗಿ ಹೋಗಿ ಸಮಯ ಹಿಂದೆ ಸರಿದು ಹೋಗಿ ಮೊದಲ ಭೇಟಿ ನೆನದ ಮೇಲೂ...
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಅಮಲು ಬೇರೆ ಇಲ್ಲವೆ
ನಿಸರ್ಗ ಹೇಳುತಿರುವ ಶಕುನ ಸಾಲೊಲ್ಲ
ಸಲ್ಲಾಪದಲ್ಲೂ ಇರುವ ಸುಖವೂ ಸಾಲೊಲ್ಲ
ಆಯಸ್ಸು ಹೆಚ್ಚಿಗೆ ಸಾಲೋದಿಲ್ಲ
ನೂರಾರು ಜನ್ಮವೂ ಸಾಲೋದಿಲ್ಲ
ನನ್ನೊಳಗೆ ಇರುವ ರಾಶಿ ಕನಸು ಸಾಲೋದಿಲ್ಲ
ನನಸಾಗಿಸೋಕೆ ದೈವಗಳು ಸಾಕಾಗೊಲ್ಲ
ಏಳು ಸ್ವರವ ಮುಗಿದ ಮೇಲೂ ಕಾಡುವಂತ ನನ್ನ ನಿನ್ನ ಯುಗಳಗೀತೆ ಮುಗಿಯೋದಿಲ್ಲ
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಅಮಲು ಬೇರೆ ಇಲ್ಲವೆ
ಶ್ವಾಸದಲ್ಲಿ ನೀನು ವಾಸವಿದ್ದ ಮೇಲೂ
ನನ್ನ ಹೃದಯವನ್ನು ಹಾಯಾಗಿ ಕದ್ದ ಮೇಲೂ
ಎರಡು ಹೃದಯ ಬೆರೆತ ಮೇಲೂ ಹಾಡು ಮುಗಿದು ಹೋದ ಮೇಲೂ ಮೌನ ತುಂಬಿ ಬಂದ ಮೇಲೂ
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೆ
Attention! Feel free to leave feedback.