Shreya Ghoshal - Neene Modalu Lyrics

Lyrics Neene Modalu - Shreya Ghoshal



ನೀನೇ ಮೊದಲು ನೀನೇ ಕೊನೆ
ಬೇರೆ ಯಾರು ಬೇಡ ನನಗೆ
ಉಸಿರು ಇರುವ ಕೊನೆಯ ವರೆಗೂ
ಇರಲೇ ಬೇಕು ನನ್ನ ಜೊತೆಗೆ
ನನ್ನನ್ನು ಪ್ರೀತಿಸು ಒಂದು ಬಾರಿ
ನಿನ್ನೆಲ್ಲ ಪ್ರೀತಿಯ ನನಗೆ ತೋರಿ
ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ
ನೀನೇ ಮೊದಲು ನೀನೇ ಕೊನೆ
ಬೇರೆ ಯಾರು ಬೇಡ ನನಗೆ
ನೀನಿರುವುದು ನನಗೆ
ನಾನು ಇರುವುದು ನಿನಗೆ
ನಮ್ಮಿಂದ ಇನ್ನೂ ಪ್ರೀತಿ ಬೆಳೆಯಲಿ ಆಕಾಶದ ತುದಿಗೆ
ಕಡಲು ಇರುವುದು ಅಲೆಗೆ
ಮಳೆಯು ಇರುವುದು ಇಳೆಗೆ
ಎದೆಯಲ್ಲಿ ಇನ್ನೂ ಜೀವ ಉಳಿದಿದೆ ನಿನ್ನ ಒಲವಿನ ಕರೆಗೆ
ಆಮಂತ್ರಿಸು ನನ್ನ ನಿನ್ನ ಪ್ರೀತಿಯ ಅರಮನೆಗೆ
ಕಾದಿರಲಿ ನಂಗೊಂದು ಅಂಬಾರಿ ಮೆರವಣಿಗೆ
ನಿನ್ನಿಂದಲೇ ನಿನ್ನಿಂದಲೇ ನಿನ್ನಿಂದಲೇ ಎಲ್ಲ ನಿನ್ನಿಂದಲೇ
ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ
ಜೀವ ಹೋದ ರೂನು
ಜೀವಕೆ ಜೀವ ನೀನು
ಸಾಕೆನ್ನು ವಂತೆ ಪ್ರೀತಿಸಬೇಕು ಸಾಯುವ ವರೆಗೂ ನಾನು
ಪ್ರತಿಯೊಂದು ಹೆಜ್ಜೆಯೂ ನನ್ನ
ನಿನ್ನ ಹತ್ತಿರ ತಂದು ಬಿಡಲಿ
ನೀ ಎಲ್ಲೆ ಹೋದರು ನಿನ್ನ ಜೊತೆಗೆ ನನ್ನ ನೆರಳೆ ಬರಲಿ
ಮನಸಾರೆ ನಿನ್ನನ್ನು ನಾ ಒಪ್ಪಿಕೊಂಡಿರುವೆ
ನಿನ್ನನ್ನು ನೋಡುತ್ತಾ ನಾ ಮೌನಿ ಯಾಗಿರುವೆ
ನಿನ್ನಿಂದಲೇ ನಿನ್ನಿಂದಲೇ ನಿನ್ನಿಂದಲೇ ಎಲ್ಲ ನಿನ್ನಿಂದಲೇ
ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ



Writer(s): adi hari


Shreya Ghoshal - Kiss (Original Motion Picture Soundtrack)
Album Kiss (Original Motion Picture Soundtrack)
date of release
01-01-2019




Attention! Feel free to leave feedback.