Shreya Ghoshal - Thangali - From "Ishtakamya" Lyrics

Lyrics Thangali - From "Ishtakamya" - Shreya Ghoshal

ತಂಗಾಳಿ ತೀಡಿ ನಂಗೇನೋ ಆಗಿದೆ ಹಂಗಾಗಿ ನಾನು ಒಂಚೂರು ಸರಿಹೋದೆ
ತಂಗಾಳಿ ತೀಡಿ ನಂಗೇನೋ ಆಗಿದೆ ಹಂಗಾಗಿ ನಾನು ಒಂಚೂರು ಸರಿಹೋದೆ
ಹೃದಯಕೆ ನಗುತ ಕುಣಿವುದ ಕಲಿಸಿ ವಿರಹದ ಹೊರೆಯ ಇಳಿಸಿಳಿಸಿಳಿಸಿ ನಾ ಹಗುರವಾದೆನು
ತಂಗಾಳಿ ತೀಡಿ ನಂಗೇನೋ ಆಗಿದೆ ಹಂಗಾಗಿ ನಾನು ಒಂಚೂರು ಸರಿಹೋದೆ
ಕ್ಷಮಿಸಲಾರೆ ನಾನು ನನ್ನೆ ನಾನು ಪ್ರೀತಿ ಅಪರಾದಿ
ನಾನು ನನ್ನೇ ಕೊಂದು ಮತ್ತೆ ಜನಿಸಿ ಬಂದೆ ಬದಲಾಗಿ
ನನ್ನ ಮುಖವ ತೊರೆದು ಹೋದ ಮುಗುಳು ನಗೆಯು ಮರಳಿದೆ
ಖುಷಿಗೆ ತಕಧಿಮಿ ಕುಣಿಯುತ ತಿರುಗುತ ಬುಗುರಿಯಾದೆನು
ತಂಗಾಳಿ ತೀಡಿ ನಂಗೇನೋ ಆಗಿದೆ ಹಂಗಾಗಿ ನಾನು ಒಂಚೂರು ಸರಿಹೋದೆ
ಒಲವಿನಲ್ಲಿ ಬಡವಿ ನಾನು ಸಣ್ಣ ಭಿಕ್ಷೆ ನೀಡು
ತೋಳ ತುಂಬಾ ತಬ್ಬಿ ಒಮ್ಮೆ ಸರಳ ಶಿಕ್ಷೆ ನೀಡು
ಚೆಂದುಟಿಗೊಂದು ಗಾಯವ ಕರುನಿಸದೆ ನೀ ಹೋದರೆ
ನನ್ನ ಕಾಲ ಗೆಜ್ಜೆಯ ಮೌನಕೆ ಉಳಿಯಲಾರೆನು.

Attention! Feel free to leave feedback.