Sonu Nigam - Chendutiya Pakkadali - From "Drama" Lyrics

Lyrics Chendutiya Pakkadali - From "Drama" - Sonu Nigam



ಹೇಳಿಬಿಡು ಹುಡುಗಿ ನಿ ನನಗೆ ಕೊಟ್ಟದ್ದು ತಿಳಿನೀಲಿ ಕನಸ, ಬರಿ ಪೋಲಿಕನಸ.
ಮಾಮೂಲಿಕತೆಯ ತಾರುಣ್ಯ ಗೀತೆಯಲಿಉತ್ತರ ಕಮ್ಮಿ, ಪ್ರಶ್ನೆಯೇಜಾಸ್ತಿ.
ದಾರೀಲಿ ಕೈ ಕಟ್ಟಿ ನಿಂತಿರಲೇ, ಹೃದಯಾನಸಂಪೂರ್ಣ ಬಿಚ್ಚಿಡಲೇ ...
ಮುಂಗುರುಳ ಸ್ಪ್ರಿಂಗ್ಅಲ್ಲಿ ಜೋತಾಡಲೇ.ಕಣ್ಣ ರೆಪ್ಪೆಯ ಮೇಲೆಮಲಗಿರಲೇ...
ಆಸೆಗಳೆನಿಸಿ ಕೈ-ಬೆರಳು ಸವಿದಿದೆ, ಎಲ್ಲಾ ಹೇಳಿದರು ಇನ್ನೇನೋ ಉಳಿದಿದೆ...
ಹೇಳಿಬಿಡು ಹುಡುಗಿ ನಿ ನನಗೆ ಕೊಟ್ಟದ್ದು ತಿಳಿನೀಲಿ ಕನಸ... ಬರಿಪೋಲಿ ಕನಸ...
ಎಲ್ಲಿಯೂ ಹೋಗದ ನಿಂತ ಬಸ್ಸಲ್ಲಿಸೀಟೊಂದ ಹಿಡಿದವನು ನಾನು.
ಇಳಿ ಸಂಜೆಯಲಿ ನಾನು ನನ್ನ ನಂಬರಿಗೆನೆಮಾಡುವೆನು ಫೋನು.
ನಡುವೆ ಹೀಗೆ ಎಲ್ಲಿಯೋ ನೋಡುವೆನು, ಎಲ್ಲಿಗೋ ಹೋಗುವೆನು, ಏನನ್ನೋಕಾಯುವೆನು.
ನಿ ಸಿಕ್ಕರು ಸಿಗದಿದ್ದರೂ ಎದೆತುಂಬಹಾಡುವೆನು...
ಹೇಳಿಬಿಡು ಹುಡುಗಿ ನಿ ನನಗೆ ಕೊಟ್ಟದ್ದು ತಿಳಿನೀಲಿ ಕನಸ... ಬರಿಪೋಲಿ ಕನಸ
ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು, ಗುರಿಇಟ್ಟು ಕಾಡಿಗೆಯಬೊಟ್ಟಿಡ್ಲ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ, ಅತಿತುಂಟ ಮಾತೊಂದನಾನಡ್ಲ
ಕಿಡಿಗೇಡಿ ಕನಸೊಂದ ಕಟ್ಟಿರ್ಲಾ, ತಡ ಮಾಡದೆಸಣ್ಣ ಮುತ್ತಿಡ್ಲ
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲ.
ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು, ಗುರಿಇಟ್ಟು ಕಾಡಿಗೆಯಬೊಟ್ಟಿಡ್ಲ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ, ಅತಿತುಂಟ ಮಾತೊಂದನಾನಡ್ಲ.
ನಿನ್ನ ಹಾಡಿನ ಪೋಲಿ ಸ್ವರವಾಗುವೆನು, ಹಾಡಿನೋಡೆನ್ನನುಸ್ಮೈಲ್ ಆರ್ದು ಬರಲಿ
ನಾಚಿಕೆಯ ನೆಪದಲ್ಲಿ ಓಡದಿರು ನನ್ನಿಂದ, ನೀಮುಡಿದ ಸಂಪಿಗೆಯಸ್ಮೆಲ್ ಆರ್ದು ಸಿಗಲಿ.
ಕೆನ್ನೆಯಲಿ ಕೆಂಪಾಗಿ ಉಳಿದಿರ್ಲಾ, ಬೆನ್ನಿನಲಿಬೆವರಾಗಿ ನಾನಿರ್ಲಾ
ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ.
ಚೆಂದುಟಿಯ ಪಕ್ಕದಲೀ ...
ಒಮ್ಮೊಮ್ಮೆ ಯೋಚಿಸುವೆ, ಯಾತಕ್ಕೆ ನಾನದೆಎದೆಯೊಳಗೆ ಕುರ್ಚಿಯನುಕೆತ್ತುವ ಬಡಗಿ
ಇಬ್ಬನಿಯು ಸುಡುತಿಹುದು, ತಂಗಾಳಿ ನಗುತಿಹುದುಇನ್ನೆಷ್ಟು ಚಳಿಗಾಲ ಕಾಯೋದೇ ಹುಡುಗಿ
ಸ್ವಪ್ನಕ್ಕೆ ಬೆಡ್ ಶೀಟು ಹೊಚ್ಚಿರ್ಲ, ಚಂದ್ರನ್ಗೆಮೊಂಬತ್ತಿಕೊಟ್ಟಿರ್ಲಾ.
ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ...
ಬಿಗಿಡಿಟ್ಟ ತಂಬೂರಿ ತಂತಿಯಂಥಾಗಿರುವೆ, ತುಂಡುಮಾಡೇನ್ನನುಸೌಂಡ್ ಆರ್ದು ಬರಲಿ
ನಿನ್ನ ತಲೆ ದಿಂಬಿನ ಚಿತ್ತಾರವಾಗಿರುವೆ, ನಿನ್ನಕನವರಿಕೆಯಲಿ ಒಂದಾದ್ರುಸಿಗಲಿ.
ಸಿಗದಂಥ ಕೊನೆ ಸಾಲು ಬಿಟ್ಟಿರ್ಲಾ, ಯಾವ್ದಕ್ಕೂಕೊನೆಗೊಂದುಡಾಟ್ ಇಡ್ಲ
ಒಹ್... ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ...
ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು, ಗುರಿಇಟ್ಟು ಕಾಡಿಗೆಯಬೊಟ್ಟಿಡ್ಲ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ, ಅತಿತುಂಟ ಮಾತೊಂದನಾನಡ್ಲ!!



Writer(s): v. harikrishna, yogaraj bhat


Sonu Nigam - Sonu Nigam - Melodies - Kannada Hits - 2016
Album Sonu Nigam - Melodies - Kannada Hits - 2016
date of release
22-02-2016




Attention! Feel free to leave feedback.