Deepak Doddera feat. Eesha Suchi - Ele Vayasina paroles de chanson

paroles de chanson Ele Vayasina - Deepak Doddera , Eesha Suchi




ಎಳೆ ವಯಸಿನ ಉಸಿರಿದು ಬಿಸಿ
ತಿಳಿ ಮನಸಿನ ಕನಸಿದು ಹಸಿ
ಮೊದಲನೇ ಸಲ ಮಿಲನದ ಖುಷಿ
ಬಯಕೆ ಮಳೆ ಜೋರಾಗಿ ಧಾವಿಸಿ
ಎದೆಯೊಳಗಡೆ ಹೊಸ ಕಸಿವಿಸಿ
ಹೃದಯದ ಜೊತೆ ಹೃದಯವ ಬೆಸಿ
ನಾಚಿಕೆಯನು ಆಚೆಗೆ ಎಸಿ
ಪಯಣದಲಿ ಪ್ರಣಯಾನ ಸೇರಿಸಿ
ಮೊಗ್ಗೊಂದು ಹಿಗ್ಗುತಲಿ ಹೂವಾಗೋ ಸಮಯ
ಮಿಂಚೊಂದು ಸಂಚರಿಸಿ ಮೈಯ್ಯಲ್ಲ ಸಿಹಿಯಾದ ಗಾಯ
ಎಳೆ ವಯಸಿನ ಉಸಿರಿದು ಬಿಸಿ
ತಿಳಿ ಮನಸಿನ ಕನಸಿದು ಹಸಿ
ಮೊದಲನೇ ಸಲ ಮಿಲನದ ಖುಷಿ
ಬಯಕೆ ಮಳೆ ಜೋರಾಗಿ ಧಾವಿಸಿ
ಯಾವ ಗುರುಕುಲವು ಗುರು ನೆರವು ಇರದೇ ಹಾಗೇನೆ
ಬೇಗ ಕಲಿತು ಬಿಡೋ ವಿಷಯವು ಒಲವೊಂದೇನೆ
ನಾಚಿ ನಯನಗಳು ಇದೆ ಮೊದಲು ಕೆಂಪಾಯ್ತು ಕೆನ್ನೆ
ಆಸೆ ಅರಳುತಲಿ ಕೆಣಕುತಿದೆ ಹೊಣೆಯು ನೀನೆ
ಕಂಡಂತ ಕನಸುಗಳು ನನಸಾಗುವ ಸಮಯ
ಓಡುತಿದೆ ಜೋರಾಗಿ ಹುಚ್ಚು ಕುದುರೆ ಏರಿ ಪ್ರಾಯ
ತೀರ ಹೊಸದಾದ ಜಗದಲ್ಲಿ ವಿಹರಿಸುತ ಜೀವ
ಮೋಜು ಅನುಭವಿಸಿ ಮರೆಯುತಿದೆ ಎಲ್ಲ ನೋವ
ಜೇನು ತುಂಬಿರುವ ಜಾತ್ರೆಯಲಿ ಕಳೆದೋದ ಭಾವ
ಮೋಹ ಅತಿಯಾಗಿ ಕಲಿತಿರುವೆ ಪ್ರೀತಿ ಪರ್ವ
ಧರೆಗಾದ ದಾಹವನು ನೀಗಿಸಿದೆ ಮುಗಿಲು
ಮರುಭೂಮಿ ನಿನ್ನಿಂದ ಆಗಿದೆ ಇಂದು ನೀನೆ ಕಡಲು
ಎದೆಯೊಳಗಡೆ ಹೊಸ ಕಸಿವಿಸಿ
ಹೃದಯದ ಜೊತೆ ಹೃದಯವ ಬೆಸಿ
ನಾಚಿಕೆಯನು ಆಚೆಗೆ ಎಸಿ
ಪಯಣದಲಿ ಪ್ರಣಾಯಾನ ಸೇರಿಸಿ



Writer(s): Kadri Manikanth, Ghouse Peer




Attention! N'hésitez pas à laisser des commentaires.