Rahul Nambiar - Ninna Haage paroles de chanson

paroles de chanson Ninna Haage - Rahul Nambiar




ನಿನ್ನ ಹಾಗೆ ಯಾರೇ ಚೆಲುವೆ
ನೀನು ತುಂಬಾ ಚೆನ್ನಾಗಿರುವೆ
ಬೆಲೆ ಕಟ್ಟದ ಪ್ರೀತಿ ನಾ ಕೊಡುವೇ
ನಿನ್ನ ಸ್ಪರ್ಶ ನಂಗೆ ಎಲ್ಲೂ ಕಾಣದ ವಿಶೇಷ
ಕಣ್ಣಾ ವೇದಿಕೆ ಮೇಲೆ ಕತೆ ಕಟ್ಟುವ ಸಂತೋಷ
ಹೀಗೆ ಇರಬೇಕು ನಿಮಿಷ
ನಿನ್ನ ಹಾಗೆ ಯಾರೇ ಚೆಲುವೆ
ನೀನು ತುಂಬಾ ಚೆನ್ನಾಗಿರುವೆ
ಬೆಲೆ ಕಟ್ಟದ ಪ್ರೀತಿ ನಾ ಕೊಡುವೆ
ನಿನ್ನ ನೆರಳ ಶಬ್ಧ ಕೇಳಿ ಸಾಗರವೇ ಮೈ ನೆರೆಯಿತು
ನಿನ್ನ ಎದೆಯ ಮುಗುಳು ನಗುವು ಅಲೆಗಳಂತಂತಾಯಿತು
ಮಳೆಯ ಹನಿಗಳ ಗಡಿಗೆಯೋ ಮರಳು ಗೂಡಿನ ಅಡಿಗೆಯೋ
ಬೀಸೋ ಗಾಳಿ ಲೇಖನಿ ಹಿಡಿಯಿತು ನಮ್ಮನು ಕುರಿತು
ನಿನ್ನ ಹಾಗೆ ಯಾರೇ ಚೆಲುವೆ
ನೀನು ತುಂಬಾ ಚೆನ್ನಾಗಿರುವೆ
ಬೆಲೆ ಕಟ್ಟದ ಪ್ರೀತಿ ನಾ ಕೊಡುವೆ
ಅಣುವು ಅಣುವು ನಿನ್ನ ಮುಖದ ಭಾವಚಿತ್ರಗಳಾಯಿತು
ಬೆರಳ ತುದಿಯು ಬೆನ್ನಾತಾಕಿ ಬಹುಶಃ ಸಂಜೆಗಳಾಯಿತು
ಉಸಿರು ಹೋದರು ಬದುಕುವೆ ಬಡವನಾದರು ಬರೆಯುವೆ
ನಿನ್ನಾ ಸನ್ನೆಗಳನ್ನ ಜೋಡಿಸಿ ಮಹಲು ಕಟ್ಟಿಸುವೆ
ನಿನ್ನ ಹಾಗೆ ಯಾರೇ ಚೆಲುವೆ
ನೀನು ತುಂಬಾ ಚೆನ್ನಾಗಿರುವೆ
ಬೆಲೆ ಕಟ್ಟದ ಪ್ರೀತಿ ನಾ ಕೊಡುವೆ





Attention! N'hésitez pas à laisser des commentaires.
//}