S. P. Balasubrahmanyam feat. Vani Jayaram - Belli Modave Yelli Oduve paroles de chanson

paroles de chanson Belli Modave Yelli Oduve - S. P. Balasubrahmanyam , Vani Jayaram




ಬೆಳ್ಳಿ ಮೋಡವೆ ಎಲ್ಲಿ ಓಡುವೆ
ನನ್ನ ಬಳಿಗೆ ನಲಿದು ಬಾ
ನನ್ನ ನಲ್ಲನ ಕಂಡು ಕ್ಷಣ
ನನ್ನ ಒಲವ ತಿಳಿಸಿ ಬಾ
ಬೆಳ್ಳಿ ಮೋಡವೆ ಎಲ್ಲಿ ಓಡುವೆ
ನನ್ನ ಬಳಿಗೆ ನಲಿದು ಬಾ
ನನ್ನ ನಲ್ಲೆಯ ಕಂಡು ಕ್ಷಣ
ನನ್ನ ಒಲವ ತಿಳಿಸಿ ಬಾ
ತಂಗಾಳಿ ಮೈ ಸೋಕಿ ನಡುಗುತಲಿರುವೆ
ಸಂಗಾತಿ ಎಲ್ಲೆಂದು ಹುಡುಕುತಲಿರುವೆ
ತಂಗಾಳಿ ಮೈ ಸೋಕಿ ನಡುಗುತಲಿರುವೆ
ಸಂಗಾತಿ ಎಲ್ಲೆಂದು ಹುಡುಕುತಲಿರುವೆ
ಮೋಹದ ಮೋಡಿಗೆ ಸಿಲುಕಿರುವೆ
ತೀರದ ದಾಹದಿ ಬಳಲಿರುವೆ
ಓ... ಇನಿಯಾ ಬಾ... ಸನಿಹ
ಎಂದೆನ್ನ ಮನ ನೊಂದು ತೂಗಾಡಿದೆ
ಬೆಳ್ಳಿ ಮೋಡವೆ ಎಲ್ಲಿ ಓಡುವೆ
ನನ್ನ ಬಳಿಗೆ ನಲಿದು ಬಾ
ನನ್ನ ನಲ್ಲೆಯ ಕಂಡು ಕ್ಷಣ
ನನ್ನ ಒಲವ ತಿಳಿಸಿ ಬಾ
ದಿನವೊಂದು ಯುಗವಾಗಿ ಉರುಳುತಲಿರಲು
ಬಾಳೆಲ್ಲ ಬರಡಾಗಿ ಕಲೆಯುತಲಿರಲು
ದಿನವೊಂದು ಯುಗವಾಗಿ ಉರುಳುತಲಿರಲು
ಬಾಳೆಲ್ಲ ಬರಡಾಗಿ ಕಳೆಯುತಲಿರಲು
ಜೀವನ ನೀರಸ ಎನಿಸಿರಲು
ಬೆಸರ ತುಂಬುತ ದಣಿದಿರಲು
ನೀ ಬರಲು ಇರುಳು
ಆನಂದ ನಮಗೆ ಎಂದು ಮನ ಹೇಳಿದೆ
ಬೆಳ್ಳಿ ಮೋಡವೆ ಎಲ್ಲಿ ಓಡುವೆ
ನನ್ನ ಬಳಿಗೆ ನಲಿದು ಬಾ
ನನ್ನ ನಲ್ಲೆಯ ಕಂಡು ಕ್ಷಣ
ನನ್ನ ಒಲವ ತಿಳಿಸಿ ಬಾ
ನಾ ಒಂಟಿ ನಿಂತಾಗ ಹೂಗಳು ಉದುರಿ
ನೋವಿಂದ ಬೆಂಡಾಗಿ ಹರಡಿದೆ ಚೆದರಿ
ಬಾನಿನ ಚಂದಿರ ಅಳುತಿರುವ
ಮಂಜಿನ ಹಾಗೆಯೆ ಕರಗಿರುವ
ಬಾ ಬಳಿಗೆ ಸೆರೆಗೆ
ಹೊಸಬಾಳು ನನಗಾಗಿ ಕೈ ಚಾಚಿದೆ
ಬೆಳ್ಳಿ ಮೋಡವೆ ಎಲ್ಲಿ ಓಡುವೆ
ನನ್ನ ಬಳಿಗೆ ನಲಿದು ಬಾ
ನನ್ನ ನಲ್ಲೆಯ ಕಂಡು ಕ್ಷಣ
ನನ್ನ ಒಲವ ತಿಳಿಸಿ ಬಾ





Attention! N'hésitez pas à laisser des commentaires.