S. P. Balasubrahmanyam - Aaseya Bhava paroles de chanson

paroles de chanson Aaseya Bhava - S. P. Balasubrahmanyam



ಆಸೆಯ ಭಾವ.
ಒಲವಿನ ಜೀವ.
ಒಂದಾಗಿ ಬಂದಿದೆ.
ಆಸೆಯ ಭಾವ.
ಒಲವಿನ ಜೀವ.
ಒಂದಾಗಿ ಬಂದಿದೆ.
ಹೊಸ ಬಗೆ ಗುಂಗಿನ
ನಿಷೆ ತಾನೇರಿದಂತಿದೆ.
ಆಸೆಯ ಭಾವ.
ಒಲವಿನ ಜೀವ.
ಒಂದಾಗಿ ಬಂದಿದೆ.
ಕಾಮನ ಬಿಲ್ಲಿನಲಿ
ಕಾಣದ ಕಾಂತಿಯನು
ಚಿಮ್ಮಿಸಿ ಹೊಮ್ಮುವ
ಚೆಲುವಿಕೆ ಇಲ್ಲಿದೆ
ಪ್ರೇಮದ ಸೀಮೆಯಲಿ
ಸೌರಭ ತುಂಬಿದ
ಬಾಡದ ಹೂವಿನ
ಕಿರುನಗೆ ಚಿಮ್ಮಿದೆ.
ಬಾಳಿನ ಭಾಗ್ಯ ನೌಕೆ
ತೀರ ಸೇರಿ ತೇಲಿ ತೇಲಿದೆ
ಮನಸಿನ ರೂಪ
ಮಂಗಳ ದೀಪ
ಆನಂದ ತಂದಿದೆ
ಹೊಸ ಬಗೆ ಗುಂಗಿನ
ನಿಷೆ ತಾನೇರಿದಂತಿದೆ
ಆಸೆಯ ಭಾವ.
ಒಲವಿನ ಜೀವ.
ಒಂದಾಗಿ ಬಂದಿದೆ.
ಕಣ್ಣಿನ ಸನ್ನೆಯಲಿ
ಕಾವ್ಯವ ನೀ ಬರೆವೆ
ಹೆಜ್ಜೆಯ ಭಾವಕೆ
ಹಂಸವೇ ನಾಚಿದೆ
ಗಾಳಿಯ ಬೀಸಿನಲಿ
ಗಾನವು ನೀನಾದೆ
ನನ್ನೆದೆ ಸ್ಪಂದನ
ನಿನ್ನದೆ ಚೇತನ
ಪ್ರೇಮದ ವೀಣೆಯಲ್ಲಿ
ಜೀವ ಭಾವ ನಾಟ್ಯವಾಡಿದೆ
ಜೀವನ ಜ್ಯೋತಿ
ನೀಡುತ ಶಾಂತಿ
ವೈಭೋಗ ತಂದಿದೆ.
ಹೊಸ ಬಗೆ ಗುಂಗಿನ
ನಿಷೆ ತಾನೇರಿದಂತಿದೆ.
ಆಸೆಯ ಭಾವ.
ಒಲವಿನ ಜೀವ.
ಒಂದಾಗಿ ಬಂದಿದೆ.
ದೂರದ ಹೃದಯಗಳ
ಸನಿಹದ ಬೇಗೆಯಲಿ
ವಿರಹದ ವೇದನೆ
ಮುಗಿಲನು ಸೇರಿದೆ.
ತೀರದ ದಾಹದಲಿ
ನೀರಿನ ಕಾತರಕೆ
ಮೇರೆಯೆ ಇಲ್ಲದ
ತುಡಿತವು ತುಂಬಿದೆ
ಯಾವುದೋ ಮೋಡಿಯಲ್ಲಿ
ಲೋಕವೆಲ್ಲ ತೂಗಿ ಸಾಗಿದೆ
ಪ್ರೇಮದ ಜೋಡಿ
ಬಾಳಲಿ ಕೂಡಿ
ಆಯಾಗಿ ಹಾಡಿದೆ
ಹೊಸ ಬಗೆ ಗುಂಗಲಿ
ನಿಷೆ ತಾನೇರಿದಂತಿದೆ.
ಆಸೆಯ ಭಾವ.
ಒಲವಿನ ಜೀವ.
ಒಂದಾಗಿ ಬಂದಿದೆ.



Writer(s): RAJAN NAGENDRA, NARASIMHA VIJAYA


S. P. Balasubrahmanyam - Hits Of S.P. Balasubrahmanyam From Kannada Films




Attention! N'hésitez pas à laisser des commentaires.