Srinivas - Ondu Sulladaru paroles de chanson

paroles de chanson Ondu Sulladaru - Srinivas




ಒಂದು ಸುಳ್ಳಾದರು ನುಡಿ ಹೆಣ್ಣೇ ನಿನ್ನ ಪ್ರಿಯತಮ ನಾನು ಎಂದು
ಸುಳ್ಳಲೇ ನಾ ಬಾಳ್ವೆ ||2||
ಹೂವಲಿ ಅಡಗಿದ ಗಂಧ ಅದು ಗಾಳಿಗೆ ಸೇರಲು ಚಂದ
ಇದು ತಾನೆ ಅನುಬಂಧ ಅನುರಾಗದ ಸಂಬಂಧ
ಚೆಲುವಿರೆ ಒಲವಿರೆ ಹಾಲು ಸಕ್ಕರೆಯು ಎರಡು ಬೆರೆತರೆ ಸವಿಯಂತೆ
ಆದರೆ ಕಹಿಯು ಏಕಂತೆ...
ಬೆಣ್ಣೆಯು ಸುಣ್ಣವು ಬಣ್ಣವು ಒಂದೇನೆ ಕಾಣೋ ಕಂಗಳು ಒಂದೇನೇ
ಆದರೆ ಗುಣವು ಬೇರೇನೇ ...
M: ಜಕ್ಕಣ್ಣನ ಶಿಲ್ಪದ .ಆ .ಆಆ ...ಆಆಆ ...
ಜಕ್ಕಣ್ಣನ ಶಿಲ್ಪದ ಅಂದವ ನಿನ್ನಲಿ ತಂದಾನೋ ಚಂದವ ನಿನ್ನಲಿ ತಂದಾನೋ
ಹಾಲು ಬೆಳದಿಂಗಳಿನ ಬಣ್ಣವ ತಂದಾನೋ .ಓ.ಓ... ...
ಜೇನು ಜೇನು ಕೇಳಿ ಅಧರದಿ ಮಧುವನಿತ್ತು
ಮಿಂಚು ಬಳ್ಳಿಯ ಕೇಳಿ ಕೈ ರೇಖೆ ತಂದಾನೋ
ಮುಂಗಾರು ತರುವ ಮೋಡ ಸಹ್ಯಾದ್ರಿ ದಾಟಿ ಬರುತ
ತಂದ ಮುತ್ತು ಮುತ್ತು ಹನಿಯೇ ನಿನ್ನಯ ನಗುವಾಯ್ತೋ
ಏಕೋ... ಹೆಣ್ಣೇ ಮನ್ಸು ಕಲ್ಲಲ್ಲಿ ಮಾಡಿಬಿಟ್ಟೇನು
ನೀನು ಒಲಿದು ಕಲ್ಲು ಕರಗುವುದುಂಟೇನೋ ...
F: ಒಂದು ಸುಳ್ಳಾದರು ನುಡಿ ಹೆಣ್ಣೇ ನಿನ್ನ ಪ್ರಿಯತಮ ನಾನು ಎಂದು
ಸುಳ್ಳಲೇ ನಾ ಬಾಳ್ವೆ ||2||
ಹೂವಲಿ ಅಡಗಿದ ಗಂಧ ಅದು ಗಾಳಿಗೆ ಸೇರಲು ಚಂದ
ಇದು ತಾನೆ ಅನುಬಂಧ ಅನುರಾಗದ ಸಂಬಂಧ
ಚೆಲುವಿರೆ ಒಲವಿರೆ ಹಾಲು ಸಕ್ಕರೆಯು ಎರಡು ಬೆರೆತರೆ ಸವಿಯಂತೆ
ಆದರೆ ಕಹಿಯು ಏಕಂತೆ
ಬೆಣ್ಣೆಯು ಸುಣ್ಣವು ಬಣ್ಣವು ಒಂದೇನೆ ಕಾಣೋ ಕಂಗಳು ಒಂದೇನೇ
ಆದರೆ ಗುಣವು ಬೇರೇನೇ ...



Writer(s): A. R. Rahman



Attention! N'hésitez pas à laisser des commentaires.