Raghu Dixit - Gudugudiya Sedi Nodo текст песни

Текст песни Gudugudiya Sedi Nodo - Raghu Dixit




ಗುಡುಗುಡಿಯ ಸೇದಿ ನೋಡೋ
ಗುಡುಗುಡಿಯ ಸೇದಿ ನೋಡೋ
ಒಡಲೊಳಗಿನ ರೋಗ ತೊರೆದು ಇನ್ಯಾರೋ
ಗುಡುಗುಡಿಯ ಸೇದಿ ನೋಡೋ
ಮನಸೆಂಬ ಸಂಚಿಯ ಬಿಚ್ಚಿ ದಿನದಿನವೂ ಮೋಹ ಅಂಬೋ
ಭಂಗಿಯ ಕೊಚ್ಚಿ ನೆನೆವೆಂಬ ಚಿಲುಮೆಯ ಹಚ್ಚಿ
ಮನಸೆಂಬ ಸಂಚಿಯ ಬಿಚ್ಚಿ
ದಿನದಿನವೂ ಮೋಹ ಅಂಬೋ
ಭಂಗಿಯ ಕೊಚ್ಚಿ ನೆನೆವೆಂಬ ಚಿಲುಮೆಯ ಹಚ್ಚಿ
ಬುದ್ಧಿ ಎನ್ನುವಂಥ ಕೆಂಡವ ಮೇಲೆ ನೀ ಮುಚ್ಚಿ
ಬುದ್ಧಿ ಎನ್ನುವಂಥ ಕೆಂಡವ ಮೇಲೆ ನೀ ಮುಚ್ಚಿ
ಗುಡುಗುಡಿಯ ಸೇದಿ ನೋಡೋ
ಬುರುಡಿ ಎಂಬುದು ಶರೀರ
ಇದನ್ನರಿತು ಸುಕೃತಕ್ಕಿಟ್ಟು ಕೊಳವಿ ಆಕಾರ, ಕೊಳವಿ ಆಕಾರ
ವರಶಿಶುನಾಳ
ವರಶಿಶುನಾಳನೆಂಬ
ನೀರ ತುಂಬಿ
ವರಶಿಶುನಾಳನೆಂಬ
ನೀರ ತುಂಬಿ
ಅರಿವೆಂಬ ಅರಿವಿಯ ಹೊಚ್ಚೋ ಮೋಜುಗಾರ
ಗುಡುಗುಡಿಯ ಸೇದಿ ನೋಡೋ
ಶುದ್ಧ ಜ್ಞಾನ ಮೇಲೇರಿ ದಾರಿದ್ರ ದೇಹ ಸುಟ್ಟು
ಹೊಗೆಯು ಹಾರುವುದು ಬುದ್ಧಿವಂತರ ಎಳೆದು
ಶುದ್ಧ ಜ್ಞಾನ ಮೇಲೇರಿ ದಾರಿದ್ರ ದೇಹ ಸುಟ್ಟು
ಹೊಗೆಯು ಹಾರುವುದು ಬುದ್ಧಿವಂತರ ಎಳೆದು
ವರಸಿದ್ದ ಶಿಶುನಾಳದೀಶನ ತೋರ್ವುದು
ವರಸಿದ್ದ ಶಿಶುನಾಳದೀಶನ ತೋರ್ವುದು
ಗುಡುಗುಡಿಯ ಸೇದಿ ನೋಡೋ
ಗುಡುಗುಡಿಯ ಸೇದಿ ನೋಡೋ
ಗುಡುಗುಡಿಯ ಸೇದಿ ನೋಡೋ
ಒಡಲೊಳಗಿನ ರೋಗ ತೊರೆದು ಇನ್ಯಾರೋ
ಗುಡುಗುಡಿಯ ಸೇದಿ ನೋಡೋ




Внимание! Не стесняйтесь оставлять отзывы.