Текст песни Srigandada Gombe - From "Yejamana" - K. S. Chithra , Rajesh Krishnan
ಶ್ರೀ ಗಂಧದ ಗೊಂಬೆ
ಮೆಲ್ಲ ಮೆಲ್ಲನೆ ಬರುತಾಳಮ್ಮ,
ಈ ಪ್ರೀತಿ ಅರಮನೆಗೆ
ಬೆಳ್ಳಿ ಬೆಳಕು ತರುತಾಳಮ್ಮ
ಮನೆ ತನಕ ಬಂದ ಹೆಣ್ಣು
ಈ ಮನೆತನ ಬೆಳಗಲಿ
ನಮ್ಮ ಹರಕೆಯು ಫಲಿಸಲಿ
ಶ್ರೀ ಗಂಧದ ಗೊಂಬೆ
ಮೆಲ್ಲ ಮೆಲ್ಲನೆ ಬರುತಾಳಮ್ಮ
ಸರಿಗಮಗಳ ಈ ಸಾಗರದಲ್ಲಿ
ಅಲೆಗಳ ಹಾಗೆ ಇವಳ ಕಾಲ್ಗೆಜ್ಜೆ
ಘಮ ಘಮಗಳ ಈ ಗೋಪುರದಲ್ಲಿ
ನಿತ್ಯ ವಸಂತ ಇವಳ ಈ ಲಜ್ಜೆ
ಮೆಲ್ಲುಸಿರು ಏದುಸಿರು ಏನಿರಲಿ
ತನ್ನ ಕನಸಿನ ಬಾಗಿನ ನಗುತಿರಲಿ
ಶ್ರೀ ಗಂಧದ ಗೊಂಬೆ
ಮೆಲ್ಲ ಮೆಲ್ಲನೆ ಬರುತಾಳಮ್ಮ,
ನಂದಾದೀಪ ಹುಟ್ಟಿದ ಮನೆಗೆ
ಆರದ ದೀಪ ನೀ ಮೆಟ್ಟಿದ ಮನೆಗೆ
ಬಯಸಿ ತಂದ ಈ ಅನುಬಂಧ
ಸಾವಿರ ಸಾವಿರ ಜನ್ಮ ಇರೋವರೆಗೆ
ಊರೆಲ್ಲ ಹರಸಿದರೆ ಪುಷ್ಪಾoಜಲಿ
ಅಣ್ಣನ ಹರಕೆ ಆನಂದ ಭಾಷ್ಪoಜಲಿ
ಶ್ರೀ ಗಂಧದ ಗೊಂಬೆ
ಮೆಲ್ಲ ಮೆಲ್ಲನೆ ಬರುತಾಳಮ್ಮ
ಈ ಪ್ರೀತಿ ಅರಮನೆಗೆ
ಬೆಳ್ಳಿ ಬೆಳಕು ತರುತಾಳಮ್ಮ
ಮನೆ ತನಕ ಬಂದ ಹೆಣ್ಣು
ಈ ಮನೆತನ ಬೆಳಗಲಿ
ನಮ್ಮ ಹರಕೆಯು ಫಲಿಸಲಿ
ಈ ಮನೆತನ ಬೆಳಗಲಿ
ನಮ್ಮ ಹರಕೆಯು ಫಲಿಸಲಿ
Внимание! Не стесняйтесь оставлять отзывы.