S. P. Balasubrahmanyam feat. Sreya Jayadeep - Rekkaya - Duet текст песни

Текст песни Rekkaya - Duet - S. P. Balasubrahmanyam , Sreya Jayadeep



ರೆಕ್ಕೆಯ ಕುದುರೆಯೇರಿ ಬೆಳ್ಳಿ ಬೆಳ್ಳಿ ಮೊಡವ ದಾಟಿ
ಬರುವ ನಿನ್ನ ಅಪ್ಪಯ್ಯ
ಮಿನುಗೊ ಚುಕ್ಕಿಗಳನ್ನು ಹಿಡಿದು ಬೊಗಸೆಯಲ್ಲಿ
ತರುವ ನಿನ್ನ ಅಪ್ಪಯ್ಯ
ರೆಕ್ಕೆಯ ಕುದುರೆಯೇರಿ ಬೆಳ್ಳಿ ಬೆಳ್ಳಿ ಮೊಡವ ದಾಟಿ
ಬರುವ ನನ್ನ ಅಪ್ಪಯ್ಯ
ಮುಡಿಯುವೆನು ಮುಡಿಯೊಳಗೆಮಿನುಗುವ ತಾರೆ
ನಡೆಯುವೆನು ಅವನಜೊತೆ ನೋಡಲಿ ಊರೇ
ಕಂದ ಕಂದ ನೀನೇ ಚಂದ ಅಂತ ಅಂತಾನೆ
ನಿನ್ನ ಕೂಡಿ ಕಣ್ಣಾಮುಚ್ಚೆ ಆಟ ಆಡ್ತಾನೆ
ರೆಕ್ಕೆಯ ಕುದುರೆಯೇರಿ ಬೆಳ್ಳಿ ಬೆಳ್ಳಿ ಮೊಡವ ದಾಟಿ
ಬರುವ ನನ್ನ ಅಪ್ಪಯ್ಯ
ಬರುವ ನನ್ನ ಅಪ್ಪಯ್ಯ
ಕಾಮನಬಿಲ್ಲನ್ನು ಕೇಳಿದ ತಕ್ಷಣ ಕೈಯಲ್ಲಿ ಇಡುತಾನೆ
ಹುಣ್ಣಿಮೆ ಬೆಳಕ ವಸ್ತ್ರವ ಮಾಡಿಸಿ ತಂದು ಕೊಡುತಾನೆ
ಕಾಮನಬಿಲ್ಲನು ಮಾಡಿಕೊಳ್ಳುವೆನು ಕೈಯಾ ಬಳೆಯಾಗಿ
ಹುಣ್ಣಿಮೆ ವಸ್ತ್ರವ ಹೊದ್ದುಕೊಳ್ಳುವೆನು ಕಂಬಳಿಯನ್ನಾಗಿ
ಸ್ವರ್ಗದ ಮೇಲೆ ಇಂದ್ರನ ಆನೆ ಎದುರು ಇಡುವನು ನಿನ್ನನು ಮುದ್ದಿಸಿ ಬರುವನು
ಬೊಂಬೆಯ ಮಾಡಿಕೊಂಡು ಅದರ ಜೊತೆಗೆ ಅಡುವೆನು
ರೆಕ್ಕೆಯ ಕುದುರೆಯೇರಿ ಬೆಳ್ಳಿ ಬೆಳ್ಳಿ ಮೊಡವ ದಾಟಿ
ಬರುವ ನನ್ನ ಅಪ್ಪಯ್ಯಾ
ಹಂಸ ನಾವೆಯಲ್ಲಿ ರಾಜಕುಮಾರಿಯ ಹಾಗೇ ನಿನ್ನನ್ನು
ಏಳು ಬೆಟ್ಟದಾಚೆ ಏಳು ಕಡಲಲ್ಲೂ ಸುತ್ತಿಸಿ ಬರ್ತಾನೆ
ಅಲ್ಲಾಹುದ್ದಿನನ ಅದ್ಭುತ ದ್ವೀಪದ ಹಾಗೆ ನನ್ನಪ್ಪ
ಎಲ್ಲಾ ಸಂತೋಷ ನೀಡುತ್ತ ನನ್ನನ್ನು ಕಂದ ಅಂತಾನೆ
ಕವಿತೆಯ ಹಾಡಿ ಖುಷಿಗಳ ನೀಡಿ ಸುಂದರ ಕತೆಗಳ ಹೇಳುತ್ತಲಿ ನಿದಿರೆ ಮಾಡಿಸುವ
ಹಿಂದಿರುಗಿ ಹೋಗದಂತೆ ನನ್ನ ತೊಳಲ್ಲಿ ಬಂದಿಸುವೆ
ಮಿನುಗೊ ಚುಕ್ಕಿಗಳನ್ನು ಹಿಡಿದು ಬೊಗಸೆಯಲ್ಲಿ
ತರುವ ನಿನ್ನ ಅಪ್ಪಯ್ಯ
ಮುಡಿಯುವೆನು ಮುಡಿಯೊಳಗೆ ಮಿನುಗುವ ತಾರೆ
ನಡೆಯುವೆನು ಅವನಜೊತೆ ನೋಡಲಿ ಊರೇ
ಕಂದ ಕಂದ ನೀನೇ ಚಂದ ಅಂತ ಅಂತಾನೆ
ನಿನ್ನ ಕೂಡಿ ಕಣ್ಣಾಮುಚ್ಚೆ ಆಟ ಆಡ್ತಾನೆ



Авторы: Nagendra Prasad, 4 Musics


S. P. Balasubrahmanyam feat. Sreya Jayadeep - Kavacha (Original Motion Picture Soundtrack)
Альбом Kavacha (Original Motion Picture Soundtrack)
дата релиза
13-11-2018



Внимание! Не стесняйтесь оставлять отзывы.